ನವದೆಹಲಿ: ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಅಣ್ವಸ್ತ್ರ ಬಳಕೆಗೆ ಹಿಂಜರಿಕೆ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಮೊದಲು ಅಣ್ವಸ್ತ್ರ ಬಳಕೆ ಮಾಡುವುದಿಲ್ಲ. ಆದರೆ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಅಣ್ವಸ್ತ್ರ ಬಳಕೆಗೆ ಹಿಂಜರಿಕೆ ಮಾಡುವುದಿಲ್ಲ ಎಂಬ ನೀತಿಯನ್ನು ಭಾರತ ಅಳವಡಿಸಿಕೊಂಡಿದೆ ಎಂದರು.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ಭಾರತ ಶೌರ್ಯ & ಸಂಯಮ ಎರಡನ್ನೂ ನೋಡಿದೆ. ಗುಪ್ತಚರ, ವೀರ ಸೈನಿಕರು, ವಿಜ್ಞಾನಿಗಳಿಗೆ ಸೆಲ್ಯೂಟ್. ಪರಾಕ್ರಮಿ ಸೇನೆಗೆ ನನ್ನ ಸಲಾಂ. ‘ಆಪರೇಷನ್ ಸಿಂಧೂರ’ ದೇಶದ ಹೆಣ್ಣುಮಕ್ಕಳಿಗೆ ಸಮರ್ಪಣೆ. ಪಹಲ್ಗಾಮ್ ದಾಳಿ ಕ್ರೂರತೆ ಮತ್ತು ಬರ್ಬರವಾಗಿ ನಡೆದಿತ್ತು. ಕುಟುಂಬಸ್ಥರ ಮುಂದೆಯೇ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಹೆಣ್ಣುಮಕ್ಕಳ ಸಿಂಧೂರ್ ಅಳಿಸಿದ ಉಗ್ರರಿಗೆ ಈಗ ಗೊತ್ತಾಗಿದೆ ಎಂದು ಹೇಳಿದರು.