ಹುಬ್ಬಳ್ಳಿ: ವಿಶ್ವಕ್ಕೆ ಶಾಂತಿ, ತ್ಯಾಗ, ಸಮಾನತೆಯ ಸಂದೇಶಗಳನ್ನು ಗೌತಮ್ ಬುದ್ಧರು ಸಾರಿದರು. ಅವರು ಸಾರಿದ ಉಪದೇಶಗಳು ತತ್ವ ಬೋಧನೆಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಡು ಬದುಕಬೇಕು ಎಂದು ಹುಬ್ಬಳ್ಳಿ ಶಹರ ಉಪ ತಹಶೀಲ್ದಾರರಾದ ಪ್ರವೀಣಕುಮಾರ್ ಪೂಜಾರಿ ಹೇಳಿದರು.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ಇಂದು ತಾಲೂಕು ಆಡಳಿತಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೌತಮ ಬುದ್ಧ ಅವರ ಸಾಧನೆ ನಮಗೆ ಸ್ಫೂರ್ತಿಯಾಗಿದೆ. ಅವರ ಸರಳ ಜೀವನ ನಮಗೆಲ್ಲ ದಾರಿದೀಪವಾಗಿದೆ. ಅವರಂತೆ ನಾವು ಕೂಡ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಗವಾನ್ ಬುದ್ಧ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಮಾಜದ ಸಾಧಕರು ಹಾಗೂ ಎಸ್.ಎಸ್.ಎಲ್.ಸಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು. ಮಂಜುನಾಥ್ ಗುಡಿಮನಿಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ಉಪ ತಹಶೀಲ್ದಾರಾದ ಗಣೇಶ್ ಹುಬ್ಳಿಕರ್, ಸಮಾಜದ ಮುಖಂಡರಾದ ಶಂಕರ್ ಅಜಮನಿ, ಸೋಮು ಹಂಜಗಿ, ನಿರ್ಮಲಾ ಹಂಜಗಿ, ಮಹೇಶ ಸೋಮಪ್ಪ ಹಂಜಗಿ, ಮಂಜುನಾಥ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.