ಬೆಂಗಳೂರು: ಬ್ಯಾಂಕ್ ಗೆ ಡೆಪಾಸಿಟ್ ಮಾಡಲು ನೀಡಿದ್ದ 1.51 ಕೋಟಿ ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ. ಆಂಧ್ರದ ಗುಂಟೂರು ಮೂಲದ ರಾಜೇಶ್(45) ಬಂಧಿತ ಆರೋಪಿಯಾಗಿದ್ದು,
ಕಳೆದ 10 ವರ್ಷಗಳಿಂದ CA ಆಗಿರುವ ತೋಟಪ್ರಸಾದ್ ಅವರ ಬಳಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದನು. ಕಳೆದ ಏಪ್ರಿಲ್ 6 ರಂದು ಬ್ಯಾಂಕ್ ಗೆ ಕಟ್ಟಲು ಹಣ ನೀಡಿದ್ದರು. ಕೋದಂಡರಾಮ್ ಪುರದಲ್ಲಿರುವ ಕಚೇರಿಯಲ್ಲಿ ಹಣ ಪಡೆದಿದ್ದ ಆರೋಪಿಯು ಪಾರ್ಕಿಂಗ್ ಬರ್ತಿದ್ದಂತೆ ತನ್ನ ಗಾಡಿಯಲ್ಲಿ ಹಣ ತೆಗೆದುಕೊಂಡು ಪರಾರಿಯಾಗಿದ್ದಾನೆ.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ಮನೆಯಲ್ಲಿ ಹಣವಿಟ್ಟು ಆಂಧ್ರಪ್ರದೇಶದಲ್ಲಿ ಸುತ್ತಾಡಿ 2.5 ಲಕ್ಷ ಖರ್ಚು ಮಾಡಿದ್ದನು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು 1.48 ಕೋಟಿ ನಗದು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.