ಬೆಂಗಳೂರು: ಕೆಲಸ ಮಾಡ್ತಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಮಹಿಳೆಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಕಮಲಾ(35) ಬಂಧಿತ ಆರೋಪಿಯಾಗಿದ್ದು, ಆರೋಪಿತೆ ಮಹಿಳೆ ಇಟ್ಮಡುವಿನ ಮನೆಯೊಂದರಲ್ಲಿ 3 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಓನರ್ ಮನೆಯಲ್ಲಿ ರಿನೋವೇಷನ್ ಕೆಲಸ ನಡೆಯುತ್ತಿತ್ತು.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ಈ ವೇಳೆ ಮನೆಯಿಂದ ನಗದು ಮತ್ತು ಚಿನ್ನಾಭರಣ ಎಗರಿಸಿದ್ದಳು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆರೋಪಿಯಿಂದ ಒಟ್ಟು 8.47 ಲಕ್ಷ ಮೌಲ್ಯದ 3.85 ಲಕ್ಷ ನಗದು,48 ಗ್ರಾಂ(4.61ಲಕ್ಷ) ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈ ಘಟನೆ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.