ಅದು 1980ರ ದಶಕ. ಆ ಸಮಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಮಲಾ ಅಕ್ಕಿನೇನಿ ಜೋಡಿ ತೆರೆಯಲ್ಲಿ ಸಖತ್ ಕಮಲ್ ಮಾಡಿತ್ತು. ಈ ಜೋಡಿ ಮಾಪ್ಪಿಲ್ಲೈ, ಕೋಡಿ ಪರಕ್ಕುತ್ತು ಮತ್ತು ವೆಲೈಕಾರನ್ ನಂತಹ ಚಿತ್ರಗಳಲ್ಲಿ ನಟಿಸಿದರು. ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರೀಗೆ ಸಿನಿಮಾಪ್ರೇಮಿಗಳು ಫಿದಾ ಆಗಿದ್ದರು. ಇದರ ಹೊರತಾಗಿ ಈ ಜೋಡಿ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರು ಎಂಬ ಸುದ್ದಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತ್ತು. ಆಗ ತಲೈವರ್ ಗೆ 36 ವಯಸ್ಸು, ಅಮಲಾ ಕೇವಲ 19 ವರ್ಷ ವಯಸ್ಸು.
1980 ರ ದಶಕದಲ್ಲಿ, ರಜನಿಕಾಂತ್ ಈಗಾಗಲೇ ಭಾರಿ ಯಶಸ್ಸನ್ನು ಗಳಿಸಿದ್ದರು. ಆ ವೇಳೆ ಸಾಕಷ್ಟು ನಟಿಯರೊಂದಿಗೆ ರಜನಿ ಕೆಲಸ ಮಾಡಿದ್ದರು. ಆದ್ರೆ ಸಾರ್ವಜನಿಕರ ಗಮನ ಸೆಳೆದ ಅಂತಹ ಒಂದು ಜೋಡಿ ಅಮಲಾ ಅಕ್ಕಿನೇನಿ ಜೊತೆಗಿತ್ತು. ವರದಿಗಳ ಪ್ರಕಾರ ‘ವೇಲೈಕಾರನ್’ ಚಿತ್ರೀಕರಣದ ಸಮಯದಲ್ಲಿ ರಜನಿ-ಅಮಲಾ ಆತ್ಮೀಯತೆ ಪ್ರಾರಂಭವಾಯಿತು ಎನ್ನಲಾಗಿದೆ. ಆತ್ಮೀಯತೆ ಪ್ರೀತಿಗೆ ತಿರುಗಿತು ಎನ್ನಲಾಗಿದೆ.
ರಜನಿಕಾಂತ್ ಮತ್ತು ಅಮಲಾ ಬಲವಾದ ಭಾವನಾತ್ಮಕ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಾರೆ ಎಂಬ ಹೇಳಿಕೆಗಳು ಗಾಸಿಪ್ ಕಾಲಮ್‌ಗಳಲ್ಲಿ ಹರಿದಾಡುತ್ತಿದ್ದವು. ಅವರು ತಮ್ಮ ವೃತ್ತಿಪರ ಜೀವನವನ್ನು ಮೀರಿ ವೈಯಕ್ತಿಕ ವಿಷಯಗಳನ್ನು ಚರ್ಚಿಸುತ್ತಾ ಆಗಾಗ್ಗೆ ಪರಸ್ಪರ ರಹಸ್ಯವಾಗಿ ಮಾತನಾಡುತ್ತಿದ್ದರು ಎಂದು ಹೇಳಲಾಗಿತ್ತು. ಪರಿಶೀಲಿಸದ ವರದಿಗಳ ಪ್ರಕಾರ, ಅಮಲಾ ಅವರ ಚಿತ್ರೀಕರಣದ ಸಮಯದಲ್ಲಿ ರಜನಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದರು.
ಅಮಲಾರನ್ನು ರಜನಿ ಹುಚ್ಚನಂತೆ ಪ್ರೀತಿಸುತ್ತಿದ್ದರಂತೆ. ಹೀಗಾಗಿ ಪತ್ನಿ ಲತಾಗೆ ಡಿವೋರ್ಸ್ ಕೊಡಲು ಮುಂದಾಗಿದ್ದರಂತೆ.ಅವರಿಗೆ ವಿಚ್ಛೇದನ ನೋಟಿಸ್ ಸಹ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಜನಿಕಾಂತ್ ಅವರ ಅಭಿಮಾನಿಗಳಿಂದ ಎಚ್ಚರಿಕೆ ಪತ್ರಗಳು ಮತ್ತು ಬಹಿಷ್ಕಾರದ ಬೆದರಿಕೆಗಳು ಬಂದಿವೆ ಎಂದು ವರದಿಗಳು ಸೂಚಿಸುತ್ತವೆ. ಈ ಸಮಯದಲ್ಲಿ ಲತಾ ರಜನಿಯ ಬಹಳ ಕಾಲ ಮಾರ್ಗದರ್ಶಕರಾಗಿದ್ದ ಕೆ. ಬಾಲಚಂದರ್ ಅವರನ್ನು ಸಂಪರ್ಕಿಸಿದ್ದರಂತೆ. ಅವರು ರಜನಿಗೆ ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ.
ಯುಎಸ್ ಪ್ರವಾಸದ ಸಮಯದಲ್ಲಿ ಅಮಲಾಗೆ ನಾರ್ಗಾರ್ಜುನ್ ಪ್ರೇಮ ನಿವೇದನೆ ಮಾಡಿದ್ದರಂತೆ. ಜೂನ್ 11 1992ರಲ್ಲಿ ಅಕ್ಕಿನೇನಿ ನಾಗಾರ್ಜುನ್ ಅಮಲಾವರನ್ನು ವರಿಸಿದ್ದರು. ಇದಕ್ಕೂ ಮೊದಲು ನಾರ್ಗಾರ್ಜುನ್ ಲಕ್ಷ್ಮೀ ದಗ್ಗುಭಾಟಿಯನ್ನು ಕೈ ಹಿಡಿಸಿದ್ದರು. ಆ ಬಳಿಕ ಈ ಜೋಡಿ ಡಿವೋರ್ಸ್ ಪಡೆದರು. ಇವರಿಬ್ಬರಿಗೆ ನಾಗಚೈತನ್ಯ ಎಂಬ ಮಗನಿದ್ದಾನೆ.