ಧಾರವಾಡ: ನಗರದಲ್ಲಿ ಆಯೋಜಿಸಿರುವ ಮಾವು ಮೇಳದಲ್ಲಿ ‘ಮಿಯಾ ಜಾಕಿ’ ಮಾವಿನ ಹಣ್ಣು ಪ್ರದರ್ಶಿಸಲಾಗಿದ್ದು, ಒಂದು ಹಣ್ಣಿನ ಬೆಲೆ ಬರೋಬ್ಬರಿ ₹ 10 ಸಾವಿರ. ಕಡುಕೆಂಪು ಸೇಬಿನ ಬಣ್ಣದ ಈ ವಿದೇಶಿ ತಳಿಯ ಹಣ್ಣು ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಬೆಳಗಾರ ಪ್ರಮೋದ ಗಾಂಷ್ಕರ ಅವರು ಕಲಕೇರಿಯ ತೋಟದಲ್ಲಿ ಈ ಮಾವು ಬೆಳೆದಿದ್ದಾರೆ.
‘ಮಿಯಾ ಜಾಕಿ ಮಾವು ಜಪಾನ್‌ನ ತಳಿ. 2012ರಲ್ಲಿ ಮಹಾರಾಷ್ಟ್ರದ ರತ್ನಗಿರಿಯ ನರ್ಸರಿಯಿಂದ ಎರಡು ಗಿಡ ತಂದು ಬೆಳೆಸಿದ್ದೇನೆ. ಈ ವರ್ಷ 25 ಮಾವಿನ ಕಾಯಿ ಫಸಲು ಇದೆ. ಕಾಯಿ ಚೆನ್ನಾಗಿ ಬಲಿಯಲು 150 ದಿನ ಹಿಡಿಯುತ್ತದೆ. ಹಣ್ಣು ಒಂದು ತಿಂಗಳವರೆಗೆ ಹಾಳಾಗಲ್ಲ’ ಎಂದು ಬೆಳೆಗಾರ ಪ್ರಮೋದ ಗಾಂಷ್ಕರ ತಿಳಿಸಿದರು.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ಈ ಹಣ್ಣು ಬಹಳ ಸಿಹಿ ಮತ್ತು ತುಂಬಾ ರುಚಿಯಾಗಿರುತ್ತದೆ. ಮುಂಬೈ, ಪುಣೆ ಮೊದಲಾದ ಕಡೆಗಳ ಗ್ರಾಹಕರು ಆನ್‌ಲೈನ್‌ನಲ್ಲಿ ಬುಕ್ ಮಾಡಿ ಈ ಹಣ್ಣು ಖರೀದಿಸುತ್ತಾರೆ. ಧಾರವಾಡ ಭಾಗದ ಹವಾಗುಣಕ್ಕೆ ಈ ತಳಿಯ ಗಿಡಗಳು ಚೆನ್ನಾಗಿ ಬೆಳೆಯುತ್ತವೆ’ ಎಂದು ಅವರು ತಿಳಿಸಿದರು.