ತುಮಕೂರು:- ಹೆತ್ತಪ್ಪನನ್ನ ಕೊಲೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ಪಾಪಿ ಮಗನನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ಜರುಗಿದೆ.
ಮರಾಠಿ ಮಾತಾಡಿದ್ರೆ ಮಾತ್ರ ದುಡ್ಡು.. ಡೆಲಿವರಿ ಬಾಯ್ ಗೆ ಧಮ್ಕಿ ಹಾಕಿದ ದಂಪತಿ!
ಎಸ್, ಈ ಖತರ್ನಾಕ್ ಮಗನ ಕೊಲೆಯ ಅಸಲಿಯತ್ತು ಬಟಾ ಬಯಲಾಗಿದ್ದು, ತಂದೆಯನ್ನೇ ಪರಲೋಕಕ್ಕೆ ಕಳಿಸಿ ಏನು ಗೊತ್ತಿಲ್ಲದಂತಿದ್ದವ ಇದೀಗ ಜೈಲು ಪಾಲಾಗಿದ್ದಾನೆ. ಈ ಪಾಪಿ ಮಗನ ನೀಚ ಕೃತ್ಯವನ್ನು ಸಿಸಿ ಕ್ಯಾಮೆರಾ ಬಯಲು ಮಾಡಿದೆ.
ಹೌದು, ಮೇ.11 ರಂದು ಕುಣಿಗಲ್ ನ ಅಪೋಲೋ ಐಸ್ ಕ್ರೀಂ ಫ್ಯಾಕ್ಟರಿಯಲ್ಲಿ ನಾಗೇಶ್(55) ಮೃತದೇಹ ಪತ್ತೆಯಾಗಿತ್ತು. ಬೆರಳಿಗೆ ಕರೆಂಟ್ ಶಾಕ್ ಹೊಡೆದು ಸತ್ತ ರೀತಿಯಲ್ಲಿ ನಾಗೇಶ್ ಶವ ಪತ್ತೆಯಾಗಿತ್ತು. ಅಲ್ಲದೇ ಅಸಹಜ ಸಾವು ಎಂದು ಎಲ್ಲಾ ಅಂತ್ಯ ಕ್ರಿಯೆ ಮುಗಿಸಲಾಗಿತ್ತು. ಆದರೆ ಸಹೋದರಿ ಸವಿತ ಈ ಬಗ್ಗೆ ಕೊಂಚ ಅನುಮಾನದಿಂದ ಪೊಲೀಸರಿಗೆ ದೂರು ಕೊಟ್ಟಿದ್ದರು. ಅಲ್ಲದೇ ಸಿಸಿಟಿವಿ ಪರಿಶೀಲನೆ ಮಾಡುವಂತೆ ಹೇಳಿದರು. ಈ ವೇಳೆ ತನಿಖೆ ಕೈಗೊಂಡ ಪೊಲೀಸರು, ಐಸ್ ಕ್ರೀಂ ಫ್ಯಾಕ್ಟರಿಯಲ್ಲಿದ್ದ ಸಿಸಿ ಕ್ಯಾಮೆರಾದ ಡಿವಿಆರ್ ವಶಪಡಿಸಿಕೊಂಡಿದ್ದರು. ಸಾವಿನ ಬಗ್ಗೆ ಯಾರು ಅನುಮಾನ ವ್ಯಕ್ತಪಡಿಸದ ಹಿನ್ನೆಲೆ ನಾಗೇಶ್ ಪುತ್ರ ಸೂರ್ಯ ಆರಾಮಾಗಿದ್ದ. ಆದರೆ ಆತನ ಗ್ರಹಚಾರ ಕೆಡಿಸಿದ್ದು ಸಿಸಿ ಕ್ಯಾಮೆರಾ. ಎಸ್, ಸಿಸಿ ಕ್ಯಾಮೆರಾ ಪರಿಶೀಲನೆ ಬಳಿಕ ಸಾವಿನ ಅಸಲಿಯತ್ತು ಬಯಲಿಗೆ ಬಂದಿದೆ.
ಆಗಿದ್ದೇನು?
ಮೇ11 ರ ಬೆಳಗಿನ ಜಾವ 1.16 ಕ್ಕೆ ಫ್ಯಾಕ್ಟರಿ ಒಳಗೆ ನಾಗೇಶ್ ಪುತ್ರ ಸೂರ್ಯ ಹಾಗೂ ಆತನ ಸ್ನೇಹಿತ ಬಂದಿದ್ದ. ಈ ವೇಳೆ ನಾಗೇಶ್ ಹಾಗು ಪುತ್ರ ಸೂರ್ಯನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಏಕಾಏಕಿ ನಾಗೇಶ್ ಕುತ್ತಿಗೆಗೆ ಬಟ್ಟೆಯಿಂದ ಜೀರಿ ನೆಲಕ್ಕುರುಳಿಸಿ ಸೂರ್ಯ ಹಾಗೂ ಆತನ ಸ್ನೇಹಿತ ಕೊಲೆಗೈದಿದ್ದಾರೆ. ನಾಗೇಶ್ ಪ್ರಾಣಬಿಟ್ಟ ಬಳಿಕ ಕೈ ಬೆರಳುಗಳಿಗೆ ಶಾಕ್ ಹೊಡೆಸಿ ಮಂಚದ ಮೇಲೆ ಮಗ ಸೂರ್ಯ ಮಲಗಿಸಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತಂದೆಯನ್ನ ಸೂರ್ಯ ಯಾವ ಕಾರಣಕ್ಕೆ ಕೊಲೆಗೈದ ಎಂದು ತಿಳಿದುಬಂದಿಲ್ಲ. ಸಿಸಿ ಕ್ಯಾಮೆರಾ ಪರಿಶೀಲನೆ ಬಳಿಕ ಸೂರ್ಯನನ್ನ ಕುಣಿಗಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಣಿಗಾಲ್ ಕ್ರೈಮ್ ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅಸಹಜ ಸಾವು ಪ್ರಕರಣ ಕೊಲೆ ಎಂದು ಸಾಬೀತಾಗಿದೆ. ಕೊಲೆಗೆ ಕಾರಣ ಏನೆಂಬುವುದು ತನಿಖೆಯಲ್ಲಿ ತಿಳಿದು ಬರಬೇಕಾಗಿದೆ.