ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟು 12 ವರ್ಷ ಪೂರೈಸಿದೆ. ಬುಲ್ ಬುಲ್ ಸಿನಿಮಾ ಮೂಲಕ ರಚಿತಾ ಸಿನಿಮಾರಂಗ ಪ್ರವೇಶಿಸಿದ್ದರು. ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಬೆಳೆದ ಡಿಂಪಲ್ ಕ್ವೀನ್ ತೆಲುಗು ಇಂಡಸ್ಟ್ರೀಗೂ ಎಂಟ್ರಿ ಕೊಟ್ಟಿದ್ದರು. ಆದ್ರೆ ಅದ್ಯಾಕೋ ಏನೋ ತೆಲುಗು ಚಿತ್ರ ರಚಿತಾ ಕೈ ಹಿಡಿಯಲಿಲ್ಲ.
ರಚಿತಾ ಸಿನಿಮಾ ಇಂಡಸ್ಟ್ರೀಗೆ ಪದಾರ್ಪಣೆ ಮಾಡಿದ್ದು ತೂಗುದೀಪ ಪ್ರೊಡಕ್ಷನ್ ಬ್ಯಾನರ್‌ನಡಿ..ರಚ್ಚು ಫಸ್ಟ್ ಹೀರೋಯಿನ್ ದಚ್ಚು. ರಚಿತಾಗೆ ದರ್ಶನ್ ಮೇಲೆ ಅದೇ ಪ್ರೀತಿ, ಗೌರವಿದೆ. ರಚಿತಾ ರಾಮ್‌ಗೆ ಡಿಂಪಲ್ ಕ್ವೀನ್ ಎಂಬ ಬಿರುದು ಸಿಕ್ಕಿದ್ದು, ಇದೇ ಬುಲ್ ಬುಲ್ ಸಿನಿಮಾದಲ್ಲಿದೆ. ಸದ್ಯ ಅಯೋಗ್ಯ 2 ಸಿನಿಮಾದಲ್ಲಿ ರಚ್ಚು ಬ್ಯುಸಿಯಾಗಿದ್ದಾರೆ.
ಸಿನಿಮಾ ಪ್ರಪಂಚಕ್ಕೆ ರಚಿತಾ ಕಾಲಿಟ್ಟು 12 ವರ್ಷ ಪೂರೈಸಿರುವ ಖುಷಿಯಲ್ಲಿ ಜೀ ಕನ್ನಡ ವೇದಿಕೆಯಲ್ಲಿ ಈ ಕ್ಷಣಗಳನ್ನು ಸೆಲೆಬ್ರೆಟ್ ಮಾಡಲಾಗಿದೆ. ಭರ್ಜರಿ ಬ್ಯಾಚುಲರ್ಸ್ ಸೀಸನ್-2 ವೇದಿಕೆಯಲ್ಲಿ ರಚಿತಾ 12 ವರ್ಷ ಸಂಭ್ರಮ ಕಳೆಗಟ್ಟಿತ್ತು. ರಚಿತಾರನ್ನು ರವಿಚಂದ್ರನ್ ಹೊಗಳಿದರು. ಆ ಬಳಿಕ ರಚಿತಾಗೆ ದರ್ಶನ್ ವಿಷ್ ಮಾಡುವ ಧ್ವನಿ ಕೇಳಿಸಿದೆ. ನಮ್ಮ ಬುಲ್ ಬುಲ್ ಎಲ್ಲರನ್ನು ಹೀಗೆ ರಂಜಿಸುತ್ತಿರಲಿ ಎಂದು ದರ್ಶನ್ ಹಾರೈಸಿದ್ದಾರೆ. ದಚ್ಚು ವಾಯ್ಸ್ ಕೇಳಿದ ತಕ್ಷಣ ರಚ್ಚುಗೆ ಫುಲ್ ಖುಷಿಯಾಗಿದೆ.
View this post on Instagram