ಬೆಂಗಳೂರು: ಒಳಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾ.ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಮತ್ತೆ ಮರು ಜಾತಿಗಣತಿ ಕಾರ್ಯ ಆರಂಭವಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕೆಲವರು ಜಾತಿ ಹೆಸರು ಹೇಳಿಕೊಳ್ಳದೆ ಹೋಗಿದ್ದರಿಂದ ರಾಜ್ಯ ಸರ್ಕಾರ ಮರು ಜಾತಿ ಗಣತಿ ನಡೆಸುತ್ತಿದೆ.
ಇವತ್ತಿನ ದಿನವೂ ಕೂಡ ಮರು ಸರ್ವೆ ನಡೆಯುತ್ತಿದೆ. ಸಮಯ ಸಾಕಾಗಲ್ಲ, ಸಮಯ ವಿಸ್ತರಣೆ ಮಾಡಿ ಅಂತಾ ಕೇಳಿದ್ದಾರೆ. ನ್ಯಾ.ನಾಗಮೋಹನ್ ದಾಸ್ ಸಮಿತಿ ನಡೆಸುತ್ತಿರುವ ಸರ್ವೆ ಸಿಬ್ಬಂದಿ ನಾನು ಊರಿಗೆ ಹೋದಾಗ ನಮ್ಮನೆಗೂ ಬಂದಿದ್ರು ಬಂದಿದ್ರು. ಸರ್ವೆ ಎಲ್ಲಾ ಚೆನ್ನಾಗಿ ಆಗ್ತಿದೆ ಅಂತಾ ಹೇಳ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.
Greater Bengaluru: ನಾಳೆಯಿಂದ BBMP ಔಟ್: ಇನ್ಮುಂದೆ ‘ಗ್ರೇಟರ್’ ಬೆಂಗಳೂರು ಅಸ್ತಿತ್ವಕ್ಕೆ
ಎಕನಾಮಿಕ್ ಸರ್ವೆ ರಿಪೋರ್ಟ್
ಕಾಂಗ್ರೆಸ್ ನ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಖಜಾನೆ ಬರಿದಾಗಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ. ಈ ನಡುವೆ, ಏಕಾನಾಮಿಕ್ ಸರ್ವೆ ರಿಪೋರ್ಟ್ ಬಗ್ಗೆಯೂ ರಾಜ್ಯ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆಯಾಗುತ್ತಿದೆ. ಆರ್ಥಿಕ ಸಮೀಕ್ಷೆ ವರದಿ ಬಗ್ಗೆ ಅಭಿಪ್ರಾಯ ಕೊಡಿ ಅಂತ ಕ್ಯಾಬಿನೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಇದಕ್ಕೆ ಮುಂದೆ ಡೇಟ್ ಫಿಕ್ಸ್ ಮಾಡ್ತಾರೆ. ಎಲ್ಲರೂ ಲಿಖಿತವಾಗಿ ಅಭಿಪ್ರಾಯ ಕೊಡ್ತಿದ್ದಾರೆ ಎಂದರು.