ಧಾರವಾಡ: ರಾಜ್ಯದಲ್ಲಿ ಅವಧಿ ಪೂರ್ವ ಮುಂಗಾರು ಪ್ರವೇಶ ಆಗಿದ್ದು, ಮುಂಗಾರು ಬಿತ್ತನೆಗೆ ತಯಾರು ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಕಾಲಕ್ಕೆ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲು ಕೃಷಿ ಇಲಾಖೆ ಸಜ್ಜಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಧಾರವಾಡಕೆ ನೀಡಿದರು.
ಧಾರವಾಡದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲ ಅಂತ ಬಿಜೆಪಿ-ಜೆಡಿಎಸ್ನವರು ಹೇಳಿದ್ರು. ಕಳೆದ ವರ್ಷ ಕೃಷಿ ಕ್ಷೇತ್ರದಲ್ಲಿ ಯಶಸ್ಸು ಕಂಡಿದ್ದು,1.48 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಆಗಿದೆ. ಇದು ದೇಶದಲ್ಲೇ ಅತಿ ಹೆಚ್ಚು ಆದ ಉತ್ಪಾದನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿಗೆ ಅಧ್ಯಕ್ಷನಾಗಿ ಮಾಜಿ ರೌಡಿಶೀಟರ್ ನೇಮಕ..! ಭುಗಿಲೆದ್ದ ಆಕ್ರೋಶ
ಈ ವರ್ಷವೂ ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆ ಗುರಿ ಹೊಂದಲಾಗಿದೆ. ಅದಕ್ಕಾಗಿ ಮುಂಗಾರಿಗೆ ತಯಾರಿ ಮಾಡಿಕೊಂಡಿದ್ದೇವೆ. ಮುಂಚಿತವಾಗಿಯೇ ಮುಂಗಾರು ಪ್ರಾರಂಭ ಆಗುತ್ತಿದೆ
ಆದರೆ ಎಲ್ಲ ಕಡೆ ಮೇ ನಂತರವೇ ಬಿತ್ತನೆ ಆಗುತ್ತದೆ. ಕೃಷಿ ಇಲಾಖೆ ಎಲ್ಲ ಜಿಲ್ಲೆಯಲ್ಲಿ ತಯಾರಿ ಮಾಡಿಕೊಂಡಿದೆ. ಇದಕ್ಕಾಗಿಯೇ ಬೆಳಗಾವಿ ವಿಭಾಗದ ಸಭೆ ಮಾಡುತ್ತಿದ್ದೇವೆ. ಇನ್ನು ಏಳು ಜಿಲ್ಲೆಗಳ ಸಭೆ ಇಂದು ಧಾರವಾಡದಲ್ಲಿ ಮಾಡುತ್ತೇವೆ ಎಂದರು.
ಕೃಷಿ ಪರಿಕರ ಸಬ್ಸಿಡಿ ಇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಸಬ್ಸಿಡಿ ಕಡಿಮೆಯಾಗಿಲ್ಲ ಕೆಲವೊಂದು ಬೆಲೆ ಜಾಸ್ತಿ ಆಗಿವೆ. ಹೀಗಾಗಿ ರೈತರು ಸಬ್ಸಿಡಿ ಜಾಸ್ತಿ ಮಾಡಿ ಅಂತಾ ಹೇಳಿದ್ದಾರೆ. ಎಲ್ಲರಿಗೂ ಸಬ್ಸಿಡಿ ಕೊಡುತ್ತಿದ್ದೇವೆ. ಸ್ವಲ್ಪ ಹೆಚ್ಚು ಮಾಡಿ ಅಂತಾ ಕೇಳಿದ್ದಾರೆ. ಎಲ್ಲಿ ಬೇಡಿಕೆ ಇದೆ, ಅಲ್ಲಿ ಸಬ್ಸಿಡಿ ಜಾಸ್ತಿ ಮಾಡುತ್ತೇವೆ ಎಂದರು.
ಇನ್ನು, ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಖಾಲಿ ಹುದ್ದೆ ನೇಮಕಾತಿ ನಡೆದಿದ್ದು
ಈ ಸಂಬಂಧಿತ ಪ್ರಸ್ತಾವನೆ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.