ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಬೆಂಗಳೂರಿನ ಪೊಲೀಸ್ ಅಧಿಕಾರಿಗಳೊಂದಿಗೆ ‘WTF’ ಪಾಡ್‌ಕ್ಯಾಸ್ಟ್ ನಡೆಸಿದ್ದಾರೆ. ನಗರದ ಟ್ರಾಫಿಕ್ ಸವಾಲುಗಳ ಬಗ್ಗೆ ಸುದೀರ್ಘವಾಗಿ ಪಾಡ್ ಕ್ಯಾಸ್ಟ್‌ನಲ್ಲಿ ಚರ್ಚೆ ನಡೆಸಿದ್ದಾರೆ. ಬೆಂಗಳೂರು ಕಮಿಷನರ್ ಬಿ. ದಯಾನಂದ್, ಟ್ರಾಫಿಕ್ ಜಾಯಿಂಟ್ ಕಮಿಷನರ್ ಅನುಚೇತ್ ಅವರೊಟ್ಟಿಗೆ ನಿಖಿಲ್ ಕಾಮತ್ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಟ್ರಾಫಿಕ್ ಸಮಸ್ಯೆ ಜೊತೆಗೆ ಸಿನಿಮಾ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಪೊಲೀಸ್ ವಾಸ್ತವವನ್ನು ಬಿಂಬಿಸುವ ಕನ್ನಡ ಹಾಗೂ ಕನ್ನಡ ಸಿನಿಮಾಗಳು ಇದ್ದಾವ ಎಂದು ನಿಖಿಲ್ ಕೇಳಿದ್ದಾರೆ. ಈ ವೇಳೆ ಬಿ ದಯಾನಂದ್ 1999ರಲ್ಲಿ ರಿಲೀಸ್ ಆಗಿದ್ದ ಅಮಿರ್ ಖಾನ್ ನಟನೆಯ ಹಿಂದಿಯ ಸರ್ಫರೋಶ್ ಚಿತ್ರ ಎಂದು ಹೇಳಿದ್ದಾರೆ. ಈ ವೇಳೆ ಅನುಚೇತ್ ಲಫಿಂಗ್ ಬುದ್ದ ಸಿನಿಮಾದ ಎಕ್ಸಂಪಲ್ ಕೊಟ್ಟರು. ಈ ವೇಳೆ ನಿಖಿಲ್ ಕಾಮತ್ ಕೆಜಿಎಫ್-2 ನೋಡಿದ್ದೀರಾ ಎಂದು ಹೇಳಿದರು. ಆಗ ಬಿ ದಯಾನಂದ್ ಹಾಗೂ ಅನುಚೇತ್ ಅವರು ಜೋರಾಗಿ ನಕ್ಕರು.
ಆಗ ಅನುಚೇತ್ ಅವರು ಕೆಜಿಎಫ್ 2 ಸಿನಿಮಾದ ಪೊಲೀಸ್ ಸ್ಟೇಷನ್‌ನ್ನು ನಾಶ ಮಾಡುತ್ತಾರೆ ಎಂದರು. ಅದಕ್ಕೆ ಎಲ್ಲರೂ ನಕ್ಕು. ಆದ್ರೆ ಜನ ಕೆಜಿಎಫ್ ಸಿನಿಮಾವನ್ನು ಇಷ್ಟಪಟ್ಟರು. ಗನ್ ಜೊತೆ ಯಶ್ ಪೊಲೀಸ್ ಸ್ಟೇಷನ್ ಹೊಡೆದು ಹಾಕುತ್ತಾರೆ. ಆದರೆ ಪೊಲೀಸರು ಸಾಯುವುದಿಲ್ಲ. ನನಗೆ ಆ ಸೀನ್ ನೆನಪು ಇದೆ. ಆ ಬಳಿಕ ಅವರು ಪೊಲೀಸ್ ಸ್ಟೇಷನ್ ಒಳಗಡೆ ಬರುತ್ತಾರೆ. ಆಗ ಬಹುತೇಕ ಪೊಲೀಸರು ರಾಕಿಭಾಯ್ ಎಂದು ಭಯಪಡುತ್ತಾರೆ. ಜನ ಗ್ಯಾಂಗ್‌ಸ್ಟರ್ ಇಷ್ಟಪಡುತ್ತಾರೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.
Papa Police Officer hurt agidare ansutte Doddamma scene nodi..😜😜#YashBOSS #KGFChapter2 #ToxicTheMovie pic.twitter.com/kAe79Vrab8
— Agasthya ᵀᵒˣᶦᶜ (@sachi_1933) May 13, 2025
ಫೇಮಸ್ ಆಗಿದ್ದ ದೊಡ್ಡಮ್ಮ ಸೀನ್!
ಕೆಜಿಎಫ್ 2 ಸಿನಿಮಾದಲ್ಲಿ ಹಲವು ಸೀನ್‌ಗಳು ಪ್ರೇಕ್ಷಕರ ನೆನಪಿನಲ್ಲಿ ಉಳಿದಿದೆ. ಚಿನ್ನದ ತುಣುಕಿಗಾಗಿ ಯಶ್ ಇಡೀ ಪೊಲೀಸ್ ಸ್ಟೇಷನ್ ದ್ವಂಸ ಮಾಡುತ್ತಾರೆ. ವ್ಯಾನ್ ಒಂದರಿಂದ ದೊಡ್ಡ ಬಂದೂಕನ್ನು ತೆಗೆದು ಅದರ ಒಂದೊಂದೆ ಪಾರ್ಟ್‌ಗಳನ್ನು ಅಸೆಂಬಲ್ ಮಾಡಿ ಫೈರಿಂಗ್ ಆರಂಭಿಸುವ ರಾಕಿ ಭಾಯ್ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿಬಿಡುತ್ತಾನೆ. ಬಳಿಕ ಆ ದೊಡ್ಡ ಬಂದೂಕಿನ ನಳಿಕೆಯಿಂದ ಸ್ಟೈಲ್ ಆಗಿ ಸಿಗರೇಟು ಹೊತ್ತಿಸಿಕೊಳ್ಳುತ್ತಾನೆ. ಆ ದೃಶ್ಯದಲ್ಲಿ ರಾಕಿ ಭಾಯ್ ಬಳಸುವ ಆ ದೈತ್ಯಾಕಾರದ ಬಂದೂಕಿಗೆ ಸಿನಿಮಾದಲ್ಲಿ ‘ದೊಡ್ಡಮ್ಮ’ ಎಂದು ಕರೆಯಲಾಗಿದೆ. ಈ ದೃಶ್ಯದ ಬಗ್ಗೆ ನಿಖಿಲ್ ಕಾಮತ್ ಮಾತನಾಡಿದ್ದಾರೆ.