ಕ್ರಿಕೆಟ್ ಜಗತ್ತು ಕಂಡ ಅದ್ಭುತ ಆಟಗಾರರಲ್ಲಿ ಒಬ್ಬರು ವಿರಾಟ್ ಕೊಹ್ಲಿ..ಕೊಹ್ಲಿಯನ್ನು ಅಭಿಮಾನಿಗಳು ಕಿಂಗ್ ಅಂತಾ ಕರೆಯೋದಿಕ್ಕೆ ಕಾರಣ ಕೊಡುವ ಅಗತ್ಯವಿಲ್ಲ ಬಿಡಿ. ಪುಟ್ಬಲ್ ದಂತಕಥೆ ಅಂತಾ ನಾವು ಕ್ರಿಸ್ಟಿಯಾನೊ ರೊನಾಲ್ಡೊ ಕರೆಯುತ್ತೇವೆ. ಹಾಗೆಯೇ ಕ್ರಿಕೆಟ್ನ ಕ್ರಿಸ್ಟಿಯಾನೋ ರೊನಾಲ್ಡೊ ಅಂದ್ರೆ ಅದು ಕೊಹ್ಲಿ. ಹಾಗಂತ ಕೆಕೆಆರ್ ಕೋಚ್ ಡ್ವೇನ್ ಬ್ರಾವೋ ವಿರಾಟ್ ವ್ಯಕ್ತಿತ್ವವನ್ನು ವರ್ಣಿಸಿದ್ದರು. ಇತ್ತೀಚೆಗಷ್ಟೇ ವಿರಾಟ್, ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬಾಯ್ ಹೇಳಿದ್ದು, ಕ್ರಿಕೆಟ್ ಜಗತ್ತು ಇದನ್ನು ಅಚ್ಚರಿಯಿಂದ ಸ್ವೀಕರಿಸಿದೆ.
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ಕಿಂಗ್ ಕೊಹ್ಲಿ ಕೂಡ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಕ್ರಿಕೆಟ್ ಜಗತ್ತಿನ ವಿಶೇಷ ವ್ಯಕ್ತಿ ಕೊಹ್ಲಿಗೆ ಆರ್‌ಸಿಬಿ ಅಭಿಮಾನಿಗಳು ವಿಶೇಷವಾಗಿ ವಿದಾಯ ಹೇಳೋದಿಕ್ಕೆ ಮಾಸ್ಟರ್ ಬ್ಲಾಸ್ಟರ್ ಐಡಿಯಾ ಮಾಡಿಕೊಂಡಿದ್ದಾರೆ.
ಸತತ 18 ಸೀಸನ್‌ಗಳಿಂದ ರಾಯಲ್ ಬೆಂಗಳೂರು ಚಾಲೆಂಜೆರ್ಸ್ ತಂಡಕ್ಕಾಗಿ ಆಟವಾಡುತ್ತಿರುವ ಕೊಹ್ಲಿ ಇಲ್ಲಿನ ಮನೆ ಮಗನಾಗಿದ್ದಾರೆ. ಇಂತಹ ಕೊಹ್ಲಿಗೆ ಆರ್‌ಸಿಬಿ ಫ್ಯಾನ್ಸ್ ನೆನಪಿನಲ್ಲಿ ಉಳಿಯುವಂತಹ ಗೌರವ ಕೊಡಲು ಸಜ್ಜಾಗಿದ್ದಾರೆ. ಮೇ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವರ್ಸಸ್ ಆರ್‌ಸಿಬಿ ಪಂದ್ಯವಿದೆ. ಈ ದಿನ ಆರ್‌ಸಿಬಿಯ ಜೆರ್ಸಿ ಬಿಟ್ಟು ಆರ್‌ಸಿಬಿ ಅಭಿಮಾನಿಗಳು 18 ನಂಬರ್ ಇರುವ ಬಿಳಿ ಜೆರ್ಸಿಯಲ್ಲಿ ಬರಲಿದ್ದಾರೆ. ಈ ಮೂಲಕ ವಿರಾಟ್‌ಗೆ ವಿಶೇಷ ಗೌರವ ಸೂಚಿಸಲಿದ್ದಾರೆ.
RCB fans request everyone to wear Test White jersey to give a great tribute to Virat Kohli. 👏❤️
– Amazing initiative by the fans! pic.twitter.com/phcg0ZfGMQ
— Mufaddal Vohra (@mufaddal_vohra) May 13, 2025
ವಿರಾಟ್ ಈ ಅಭಿಮಾನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಜೋರಾಗಿವೆ. ಎಲ್ಲಾ ಆರ್‌ಸಿಬಿ ಅಭಿಮಾನಿಗಳು ರೆಡ್ ಜೆರ್ಸಿ ಬದಲು ಬಿಳಿ ಬಣ್ಣದ ಜೆರ್ಸಿ ನಂಬರ್ 18 ತೊಟ್ಟು ಇಡೀ ಚಿನ್ನಸ್ವಾಮಿ ಸ್ಟೇಡಿಯಂನ್ನು ಬಿಳಿಮಯ ಮಾಡುತ್ತಾರಾ ಅನ್ನೋದು ಸದ್ಯಕ್ಕಿರುವ ಕುತೂಹಲ.
Dear @RCBTweets , This is How chinnaswamy should look on 17 May.
Please make it happen 🙏.#ViratKohli𓃵 pic.twitter.com/zn5wNetDwb— Kaisar (@Kaisarisbest) May 13, 2025