ಮೈಸೂರು: ಭಾರತೀಯ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರಗಾಮಿಗಳನ್ನು ಮಣ್ಣು ಮುಕ್ಕಿಸಿದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತೀಯ ಸೇನೆ ಉಗ್ರರ 9 ಶಿಬಿರಗಳನ್ನು ಧ್ವಂಸ ಮಾಡಿದ್ದಲ್ಲದೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರಗಾಮಿಗಳನ್ನು ಮಣ್ಣು ಮುಕ್ಕಿಸಿದೆ, ಸೇನೆಯ ದಾಳಿಯಲ್ಲಿ ಏನಿಲ್ಲವೆಂದರೂ 100 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಹೇಳಿದರು.
Benefits of Peanut: ಬಡವರ ಬಾದಾಮಿ ಕಡಲೆ ಕಾಯಿಯಲ್ಲಿದೆ ಆರೋಗ್ಯದ ಗುಟ್ಟು..! ತಿಳಿದ್ರೆ ಶಾಕ್ ಆಗ್ತೀರಾ..
ಪಾಕಿಸ್ತಾನ ಒಂದು ಮುಸ್ಲಿಂ ರಾಷ್ಟ್ರವಾದರೂ ಭಾರತದೊಂದಿಗೆ ಯುದ್ಧ ಮಾಡುವಾಗ ಇಸ್ಲಾಮಿಕ್ ರಾಷ್ಟ್ರಗಳ್ಯಾವೂ ಅದರ ಜೊತೆ ನಿಲ್ಲಲಿಲ್ಲ, ಭಯೋತ್ಪಾದನೆಯಿಂದ ಆ ರಾಷ್ಟ್ರಗಳು ಅಷ್ಟು ಬೇಸತ್ತಿವೆ ಎಂದರು.
ಇನ್ನೂ ಮೈಸೂರಿನಲ್ಲಿ ಒಂದು ಕ್ರಿಕೆಟ್ ಸ್ಟೇಡಿಯಂ ಬೇಕು ಎಂಬ ನಿರ್ಣಯಕ್ಕೆ ಕೆಎಸ್ಸಿಎ ಬಂದಿತ್ತು. ನಂತರ ಕೆಎಸ್ಸಿಎ ಅಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ನಂತರ ಸರ್ಕಾರಕ್ಕೆ ಮನವಿ ಮಾಡಲಾಯಿತು.
ಆಗ ಬಿಜೆಪಿ ಸರ್ಕಾರ ಇತ್ತು. ಭೂಮಿ ಗುರುತಿಸಲಾಗಿದೆ, ಅದನ್ನು ಸ್ವಾಧೀನಪಡಿಸಿಕೊಳ್ಳಲು ನೆರವಾಗಬೇಕು ಎಂದು ಕೆಎಸ್ಸಿಎ ಮನವಿ ಮಾಡಿತ್ತು. ಅದು ಬಹಳ ವಿಳಂಬ ಆಗುತ್ತಿತ್ತು. ಆ ಬಳಿಕ ಜಿಲ್ಲಾಧಿಕಾರಿ ಭೂಮಿ ಗುರುತಿಸಿದ್ದರು. ಮುಖ್ಯಮಂತ್ರಿ ಬಳಿ ನಾವು ಮನವಿ ಮಾಡಿದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.