ಬೆಂಗಳೂರು:- ಭಾರತದ ಅತ್ಯಂತ ಸುರಕ್ಷಿತ ನಗರ ಬೆಂಗಳೂರು. ನಿಜನಾ? ಅಂತಾ ಹುಬ್ಬೇರಿಸಬೇಡಿ. ಖಂಡಿತ ಸತ್ಯ. ಯೂನಿವರ್ಸಿಟಿ ಆಫ್ ಹೈದರಾಬಾದ್ ನಡೆಸಿದ ಸರ್ವೇಯಲ್ಲಿ ಬೆಂಗಳೂರು ಅತಂತ್ಯ ಸುರಕ್ಷಿತ ನಗರವಾಗಿ ಹೊರಹೊಮ್ಮಿದೆ.
ಬಿಡದಿ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಸರ್ಕಾರದಿಂದ ನ್ಯಾಯ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ!
ಬೇರೆ ನಗರಗಳಿಗೆ ಹೊಸ ಹೋಲಿಕೆ ಮಾಡಿದರೆ ಕಳೆದ ಸಾಲಿನ 3 ತಿಂಗಳಲ್ಲಿ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಈ ಮೂಲಕ ರಾಷ್ಟ್ರದಲ್ಲೇ ಅತ್ಯಂತ ಸುರಕ್ಷಿತ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿ ನೋಡುವುದಾದರೆ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಶೇಕಡ 12ರಷ್ಟು ಇಳಿಕೆ ಕಂಡು ಬಂದಿದೆ.
ಸೈಬರ್ ವಂಚನೆ ಪ್ರಕರಣಗಳಲ್ಲಿ 39% ರಷ್ಟು ಕಡಿಮೆಯಾಗಿದೆ. ಡಕಾಯಿತಿ ಶೇ. 71 ರಷ್ಟು, ದರೋಡೆ ಶೇ. 73 ರಷ್ಟು, ಸರಗಳ್ಳತನ ಶೇ. 57 ರಷ್ಟು ಕಡಿಮೆಯಾಗಿದೆ.