ಚಾಮರಾಜನಗರ:- ಇಲ್ಲಿನ ಬಿಳಿಗಿರಿರಂಗನ ಬೆಟ್ಟಕ್ಕೆ ಬುಧವಾರ ಸಚಿವ ವೆಂಕಟೇಶ್ ಭೇಟಿ ನೀಡಿದರು. ಈ ವೇಳೆ ಸಚಿವರ ಅಡ್ವಾನ್ಸ್ ಪೈಲಟ್ ವಾಹನ ಪಲ್ಟಿ ಹೊಡೆದಿದೆ. ಘಟನೆಯಿಂದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಾಗೂ ಚಾಲಕನಿಗೆ ಗಾಯವಾಗಿದೆ.
ಮುಂಗಾರಿನ ಆರ್ಭಟ: ಒಂದು ವಾರ ಈ ಜಿಲ್ಲೆಗಳಲ್ಲಿ ಭಾರೀ ಮಳೆ! ಎಲ್ಲೆಲ್ಲಿ?
ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ತಿರುವಿನಲ್ಲಿ ಈ ಘಟನೆ ಜರುಗಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಕಾಶ್ ಹಾಗೂ ಚಾಲಕನಿಗೆ ಗಂಭೀರ ಗಾಯವಾಗಿದೆ. ಇಬ್ಬರಿಗೂ ಗಂಭೀರ ಗಾಯ ಹಿನ್ನಲೆ, ಚಿಕಿತ್ಸೆಗೆ ಮೈಸೂರಿಗೆ ರವಾನೆ ಮಾಡಲಾಗಿದೆ.