ದೊಡ್ಡಬಳ್ಳಾಪುರ : ಎಸ್ ಎಸ್ ಎಲ್ ಸಿ ಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ತಾಲೂಕಿನ ಮೆಳೆಕೋಟೆ ಕ್ರಾಸ್ ಬಳಿ ಇರುವ ಎಸ್ ಜೆ ಸಿ ಆರ್ ಶಾಲೆಯ ವಿದ್ಯಾರ್ಥಿ ರಂಜಿತಾ ಗೆ ಬಿಜೆಪಿ ಮುಖಂಡ, ವಕೀಲರು ಆದ ಪ್ರತಾಪ್ ಆರ್ ಸಹಾಯ ಧನ ನೀಡಿ ಗೌರವಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ನಡೆ ಗ್ರಾಮ ಪಂಚಾಯಿತಿ ಕಡೆ.. ಶೋಷಿತರ ಪರವಾದ ಗ್ಯಾರಂಟಿ!
ತೂಬಗೆರೆ ಹಲಸು ಬೆಳೆಗಾರರ ಸಂಘ, ಜಿಲ್ಲಾ ತೋಟಗಾರಿಕೆ ಇಲಾಖೆ ಮತ್ತು ಭಾ.ಕೃ.ಅ.ಪ – ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರುಗಳ ಸಹಯೋಗದೊಂದಿಗೆ “ಹಕ್ಕು ಸ್ವಾಮ್ಯ ಪ್ರಮಾಣಪತ್ರ ವಿತರಣೆ ಮತ್ತು ಕೃಷಿ – ವಿಜ್ಞಾನಿಗಳೊಂದಿಗೆ” ಸಂವಾದ ಕಾರ್ಯಕ್ರಮದಲ್ಲಿ ಹಲಸು ಬೆಳೆಗಾರನ ಮಗಳಿಗೆ ಸಹಾಯ ಧನ ನೀಡಿದರು.
ಇದೆ ವೇಳೆ AIN ಕನ್ನಡ ಜೊತೆ ಬಿಜೆಪಿ ಮುಖಂಡ, ವಕೀಲ ಪ್ರತಾಪ್,ಆರ್ ಮಾತನಾಡಿ ರೈತನ ಮಗಳು ರಂಜಿತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರವುದು ಸೊಂತೋಷದ ವಿಷಯ. ನಾವು ಕೂಡ ಬಡ ಕುಟುಂಬದಲ್ಲಿ ಜನಿಸಿ ಈ ಮಟ್ಟಕ್ಕೆ ಬೆಳೆದಿದ್ದೇನೆ.ಬಡವರ ಕಷ್ಟಗಳು ನಾನು ಚೆನ್ನಾಗಿ ಅರಿತಿದ್ದೇನೆ ವಿದ್ಯಾರ್ಥಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿ ಎಂದು ಅಲ್ಪ ಧನ ಸಹಾಯ ಮಾಡಿದ್ದೇನೆ.
ರಂಜಿತಾ ಅವರು ಉನ್ನತ ವ್ಯಾಸಂಗ ಪೂರೈಸಿ ಸಮಾಜದ ಸೇವೆಗಾಗಿ ಉನ್ನತ ಅಧಿಕಾರಿಯಾಗಲಿ ಹಾಗೆ ನಮ್ಮ ರೈತರ ಮಕ್ಕಳು ಇನ್ನು ಹೆಚ್ಚು ಹೆಚ್ಚು ಉನ್ನತ ವ್ಯಾಸಂಗ ಮಾಡಲಿ ಎಂದು ಹೇಳಿದರು. .
ವೇಳೆ ವಿಶ್ರಾಂತ ಕುಲಪತಿ ನಾರಾಯಣ ಗೌಡ, ಜಿಕೆವಿಕೆ ವಿಜ್ಞಾನಿ ಡಾ ಶಾಮಲಾ, ತೂಬಗೆರೆ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ರವಿಕುಮಾರ್, ಪಿಪಿಎಫ್‌ಆರ್‌ಎ ಪೇಟೆಂಟ್ ಪಡೆದ ಹಲಸು ಬೆಳೆಗಾರ ಕೃಷ್ಣಪ್ಪ, ಜಿಕೆವಿಕೆ ವಿಜ್ಞಾನಿಗಳಾದ ಡಾ.ಹನುಮಂತರಾಯ, ಡಾ. ಬಾಬು ರೈ, ಡಾ. ಸವಿತಾ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿಲಕ್ಷ್ಮಮ್ಮ ರಾಮಕೃಷ್ಣ, ಸದಸ್ಯ ಕೃಷ್ಣಪ್ಪ (ಕಿಟ್ಟಿ).ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಅಪ್ಪಯ್ಯಣ್ಣ, ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ತೂಬಗೆರೆ ಹಲಸು ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್, ವಕೀಲ ಪ್ರತಾಪ್, ಮುಖಂಡರಾದ ವೆಂಕಟೇಶ್, ಕನಕದಾಸ, ರವಿಸಿದ್ದಪ್ಪ, ವಾಸು, ರಂಗಪ್ಪ, ಶ್ರೀಧರ ಮತ್ತಿತರರು ಉಪಸ್ಥಿತರಿದ್ದರು.