ವಿಜಯಪುರ:- ಮಹಾತ್ಮ ಗಾಂಧಿ ಬಗ್ಗೆ ನಾಲಿಗೆ ಹರಿಬಿಟ್ಟ ಶಾಸಕ ಯತ್ನಾಳ ವಿರುದ್ಧ FIR ದಾಖಲಾಗಿದೆ.
ಯತ್ನಾಳ ವಿರುದ್ಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಅಲ್ಲಾಭಕ್ಷ ಡೋಗರಿಸಾಬಾ ಬಢೇಘರ್ ಎನ್ನುವರು ಪ್ರಕರಣ ದಾಖಲು ಮಾಡಿದ್ದಾರೆ.
SSLC ಯಲ್ಲಿ 625 ಕ್ಕೆ 625 ಅಂಕ ಪಡೆದ ಹಲಸು ಬೆಳೆಗಾರನ ಮಗಳು: ಸಹಾಯ ಧನ ನೀಡಿದ ಬಿಜೆಪಿ ಮುಖಂಡ!
ಆದರ್ಶ ನಗರದಲ್ಲಿ ಮೇ 12 ರಂದು ನಡೆದ ಬಸವೇಶ್ವರ ದೇವಾಸ್ಥಾನದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುವಾಗ ಮಹಾತ್ಮ ಗಾಂಧೀಜಿಗೆ ಅವಮಾನ ಮಾಡಿರುವ ಆರೋಪ ಮಾಡಲಾಗಿದೆ. ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ಪಿತಾಮಹ. ನಮ್ಮ ದೇಶವನ್ನು ಹೊಡೆದು ಬೇರೆಯವರಿಗೆ ಪಾಕಿಸ್ತಾನ ಮಾಡಿಕೊಟ್ಟರು. ಆದರೂ ನಾವು ರಾಷ್ಟ್ರಪಿತ ಎಂದು ಬೀದಿ ಬೀದಿಗಳಲ್ಲೂ ಅವರ ಮೂರ್ತಿಗಳುನ್ನು ಸ್ಥಾಪನೆ ಮಾಡಿದ್ದೇವೆ ಎಂದು ಯತ್ನಾಳ ಹೇಳಿದ್ದರು.
ಸದ್ಯ ಈ ಸಂಬಂಧ ಯತ್ನಾಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ದೂರು ನೀಡಿರುವ ಅಲ್ಲಾಭಕ್ಷ ಡೋಗರಿಸಾಬಾ ಬಢೇಘರ್ ಅವರಿಗೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.