ಬೆಂಗಳೂರು: ಬಿಬಿಎಂಪಿ ಇಂದಿನಿಂದ ಇತಿಹಾಸದ ಪುಟ ಸೇರಿದ್ದು, ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ಥಿತ್ವಕ್ಕೆ ಬಂದಿದೆ.
ಡಿಸಿಎಂ ಡಿ.ಕೆ ಶಿವಕುಮಾರ್ ಕನಸಿನ ಕೂಸು ಗ್ರೇಟರ್ ಬೆಂಗಳೂರು. ಗ್ರೇಟರ್ ಬೆಂಗಳೂರು ಕಾನ್ಸೆಪ್ಟ್ ತಂದವರು ಡಿಕೆ ಶಿವಕುಮಾರ್. ಡಿಕೆಶಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತೇನೆ.
ಅವರ ಗ್ರೇಟರ್ ಬೆಂಗಳೂರು ಕಾನ್ಸೆಪ್ಟ್ ಯಶಸ್ವಿಯಾಗಲಿ. ಇದು ಬೆಂಗಳೂರಿಗೆ ಹೊಸ ರೀತಿಯಲ್ಲಿ ಆಗುತ್ತದೆ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಸಂತಸ ವ್ಯಕ್ತಪಡಿಸಿದ್ದಾರೆ.\
Greater Bengaluru: BBMP ಇನ್ಮುಂದೆ GBA: ಇಂದಿನಿಂದ “ಗ್ರೇಟರ್ ಬೆಂಗಳೂರು” ಜಾರಿ
ಪ್ರಪಂಚದಲ್ಲಿ ದೊಡ್ಡ ದೊಡ್ಡ ಪಟ್ಟಣಗಳು ಹೇಗಿವೆ ಅಂತ ನೋಡಿದ್ದೇವೆ. ಈ ಕಾನ್ಸೆಪ್ಟ್ ಯಾವ ರೀತಿ ಕೆಲಸ ಮಾಡುತ್ತದೆ ನೋಡೋಣ. ಸ್ವಲ್ಪ ದಿನಗಳಲ್ಲಿ ಫಲಿತಾಂಶ ಗೊತ್ತಾಗುತ್ತದೆ, ನೂನ್ಯತೆಗಳಿದ್ರೆ ಸರಿಪಡಿಸೋಣ. ಆಡಳಿತ ವಿಕೇಂದ್ರೀಕರಣ ಜೊತೆಗೆ ಕಾರ್ಯಕ್ರಮ, ಯೋಜನೆಗಳಿಗೆ ಫೋಕಸ್ ಮಾಡಲು ಸಾಧ್ಯವಾಗುತ್ತದೆ. ಒಬ್ಬರೇ ಅಧಿಕಾರಿಯಿದ್ರೆ ಫೋಕಸ್ ಮಾಡಲು ಕಷ್ಟ ಆಗುತ್ತದೆ. ಹೀಗಾಗಿ ಅಧಿಕಾರಿಗಳು ಜಾಸ್ತಿ ಆದ್ರೆ ಸುಲಭವಾಗುತ್ತದೆ ಎಂದು ಪರಮೇಶ್ವರ್ ವಿಶ್ಲೇಷಿಸಿದ್ದಾರೆ.