ಡೈರೆಕ್ಟರ್ಸ್‌ಗಳ ಡೈರೆಕ್ಟರ್, ರಿಯಲ್ ಸ್ಟಾರ್, ಸೂಪರ್ ಸ್ಟಾರ್, ಬುದ್ದಿವಂತ..ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಉಪೇಂದ್ರ ನಟನರಾಗಿ ಹಾಗೂ ನಿರ್ದೇಶಕರಾಗಿಯೂ ಖ್ಯಾತಿ ಗಳಿಸಿದವರು. ಡಿಫರೆಂಟ್ ಸಿನಿಮಾಗಳ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಉಪ್ಪಿ, ಸೂಪರ್ ಸ್ಟಾರ್ ರಜನಿಕಾಂತ್ ಅವರಿಂದಲೂ ಶಹಬ್ಬಾಸ್‌ಗಿರಿ ಪಡೆದಿದ್ದರು.
ಅಂದು ಉಪೇಂದ್ರ ನಿರ್ದೇಶನದ ಸೂಪರ್ ಸಿನಿಮಾ ನೋಡಿ ತಲೈವಾ ಬಾಯ್ ತುಂಬಾ ಹೊಗಳಿದ್ದರು. ಉಪ್ಪಿ, ಡಿಫರೆಂಟ್ ಆಕ್ಟರ್ ಡೈರೆಕ್ಟರ್, ಅವರ ರೀತಿ ಇಂಡಸ್ಟ್ರೀಯಲ್ಲಿ ಯೋಚಿಸುವ ನಿರ್ದೇಶಕರು ಯಾರು ಇಲ್ಲ ಸೂಪರ್ ಐ ಲೈಕ್ ಇಟ್ ಎಂದಿದ್ದರು. ಈಗ ರಜನಿ ಡೈರೆಕ್ಟರ್ ಉಪೇಂದ್ರ ಅವರ ಅಭಿಮಾನಿಯಂತೆ.
ರಜನಿಕಾಂತ್ ಜೊತೆ ಉಪೇಂದ್ರ ಕೂಲಿ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ ʼಕೈದಿ’, ‘ಮಾಸ್ಟರ್’, ‘ವಿಕ್ರಮ್’ ಖ್ಯಾತಿಯ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಆಮೀರ್ ಖಾನ್, ನಾಗಾರ್ಜುನ್ ಸೇರಿದಂತೆ ದೊಡ್ಡ ತಾರಾಬಳಗದ ನಟಿಸಿರುವ ಕೂಲಿ ಪ್ರಚಾರದ ವೇಳೆ ಲೋಕೇಶ್ ಉಪೇಂದ್ರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
‘ನನಗೆ ಉಪೇಂದ್ರ ಅಂದ್ರೆ ಇಷ್ಟ. ಉಪೇಂದ್ರ ಅವರ ನಿರ್ದೇಶನಕ್ಕೆ ನಾನು ಫ್ಯಾನ್. ಅವರ ಸ್ಟ್ರೆಂತ್ ಏನು ಎಂದು ತಿಳಿದುಕೊಳ್ಳದೆ ಅವರ ಜೊತೆ ಸಿನಿಮಾ ಮಾಡಲು ಸಾಧ್ಯವಿಲ್ಲ. ಅವರು ಸಿನಿಮಾದಲ್ಲಿ ಏನು ಮಾಡುತ್ತಾರೆ ಎಂದು ತಿಳಿದುಕೊಂಡ ಬಳಿಕವೇ ಸಿನಿಮಾ ಮಾಡಬೇಕು. ಇಲ್ಲವಾದಲ್ಲಿ ಫ್ಯಾನ್ಸ್ ನಿರಾಸೆ ಗೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಲೋಕೇಶ್ ಕನಗರಾಜ್ ಅವರು ಹೇಳಿದ್ದಾರೆ.
la'm Fan For @nimmaupendra Sir Direction 🎥🔥 @Dir_Lokesh 🙌😘#SuperStarUpendra #Sandalwood #lokeshkanagaraj #Upendra #UppiDirects #Coolie pic.twitter.com/TK5L0J7Hqq
— Upendra Fan's Bijapur 🚩 (@Ambojiuppi) May 13, 2025
ರಜನಿಕಾಂತ್ ಕೂಲಿ ಸಿನಿಮಾದಲ್ಲಿ ರಜನಿ ಸ್ಪೆಷಲ್ ಪಾತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್ 15ಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನದ ಈ ಸಿನಿಮಾ ತೆರೆಗೆ ಬರಲಿದೆ.