ವಿಜಯಪುರ:- ಪಾಕಿಸ್ತಾನ ಎಂಬುದು ನಮ್ಮ ದೇಶಕ್ಕೆ ಲೆಕ್ಕನೇ ಅಲ್ಲ ಎಂದು ಕಾಂಗ್ರೆಸ್ ಮುಖಂಡ ಭೈರತಿ ಸುರೇಶ್ ಹೇಳಿದ್ದಾರೆ.
ಈ ರಾಶಿಯವರಿಗೆ ಮದುವೆ ಸಂಬಂಧ ಮನೆ ಬಾಗಿಲಿಗೆ ಬರುವ ಸಾಧ್ಯತೆ ಕಾಣುತ್ತಿದೆ: ಶುಕ್ರವಾರದ ರಾಶಿ ಭವಿಷ್ಯ16 ಮೇ 2025
ಪಾಕ್ ಕದನ ವಿರಾಮ ಉಲ್ಲಂಘಟನೆ ವಿಚಾರವಾಗಿ ಮಾತನಾಡಿದ ಅವರು, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವವರ ಬಿಡುವರ ಪ್ರಶ್ನೆಯೇ ಇಲ್ಲ. ಪಾಕಿಸ್ತಾನ ಎಂಬುದು ನಮ್ಮ ದೇಶಕ್ಕೆ ಲೆಕ್ಕನೇ ಅಲ್ಲ. ಪಾಕ್ ನಲ್ಲಿ ತಿನ್ನಕ್ಕೆ ಊಟ ಇಲ್ಲ ಓಡಾಡಲು ರಸ್ತೆ ಇಲ್ಲ. ನಮ್ಮ ದೇಶದ ಮುಸ್ಲಿಂಮರಿಗೆ ಸಹಿತ ದೇಶಭಕ್ತಿ ಇದೆ, ಆಮೇಲೆ ಜಾತಿ ಜನಾಂಗ.
ಯುದ್ದವಾಗಲಿ ಏನೇ ಆಗಲಿ ದೇಶದೊಟ್ಟಿಗೆ ನಾವಿದ್ದೇವೆ. ನಮ್ಮ ದೇಶದ ರಕ್ಷಣಾ ವ್ಯವಸ್ಥೆ, ಇಡೀ ಪ್ರಪಂಚದಲ್ಲಿ ಅತ್ಯಂತ ಬಲಯುತವಾಗಿದೆ. ಯಾವುದೇ ದೇಶದ ಮುಂದೆ ಕೈ ಒಡ್ಡಿ ನಿಲ್ಲುವ ಪರಿಸ್ಥಿತಿ ನಮ್ಮ ದೇಶಕ್ಕಿಲ್ಲ. ನಮ್ಮ ದೇಶ ಸದೃಡವಾಗಿದೆ, ಮಿಲಿಟರಿ ಸಿಸ್ಟಮ್ ಸದೃಡವಾಗಿದೆ. ಪಾಕಿಸ್ತಾನ ಒಳಗೊಂಡಂತೆ ಇಡೀ ಪ್ರಪಂಚದ ಯಾವುದೇ ಬಲಯುತವಾದ ಕ್ಷೇತ್ರದ ಮೇಲೆ ಹೋಗಿ ಹೊಡೆದಾಕುವ ಶಕ್ತಿ ನಮಗಿದೆ ಎಂದು ಸಚಿವ ಭೈರತಿ ಸುರೇಶ ಹೇಳಿದ್ದಾರೆ.