IPL ಮರು ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಮುಂಬೈ ತಂಡಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಐಪಿಎಲ್ 18 ನೇ ಋತುವಿನಲ್ಲಿ, ವಿಲ್ ಜ್ಯಾಕ್ಸ್ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಫ್ರಾಂಚೈಸಿ ಈಗ ಜ್ಯಾಕ್ಸ್ ಬದಲಿಗೆ ಮತ್ತೋರ್ವ ಸ್ಫೋಟಕ ಬ್ಯಾಟರ್ ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಅವರನ್ನು ತಮ್ಮ ತಂಡಕ್ಕೆ ಸೇರಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಬೈರ್‌ಸ್ಟೋವ್ ಮತ್ತು ಫ್ರಾಂಚೈಸಿ ನಡುವಿನ ಮಾತುಕತೆ ಅಂತಿಮ ಹಂತದಲ್ಲಿದೆ. ಉಳಿದ ಎರಡು ಲೀಗ್ ಪಂದ್ಯಗಳ ನಂತರ ಮುಂಬೈ ಇಂಡಿಯನ್ಸ್ ಪರ ಬೈರ್‌ಸ್ಟೋವ್ ಆಡುವ ಸಾಧ್ಯತೆ ಇದೆ. ಮುಂಬೈ ಇಂಡಿಯನ್ಸ್ ತಂಡ ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 14 ಅಂಕಗಳನ್ನು ಗಳಿಸಿದೆ.
ಜಾನಿ ಬೈರ್‌ಸ್ಟೋವ್ ಮುಂಬೈ ಇಂಡಿಯನ್ಸ್ ಸೇರುವುದನ್ನು ಅಧಿಕೃತವಾಗಿ ಘೋಷಿಸಲಾಗಿಲ್ಲ. ಮಾತುಕತೆ ಬಹುತೇಕ ಅಂತಿಮಗೊಂಡಿದೆ. ವಾಸ್ತವವಾಗಿ, ಮುಂಬೈ ಇಂಡಿಯನ್ಸ್ ತಂಡವು ಲೀಗ್ ಹಂತದಲ್ಲಿ ಇನ್ನೂ ಎರಡು ಪಂದ್ಯಗಳನ್ನು ಆಡಬೇಕಾಗಿದೆ. ಈ ಎರಡೂ ಪಂದ್ಯಗಳು ತಂಡಕ್ಕೆ ಬಹಳ ಮುಖ್ಯ. ಏಕೆಂದರೆ ಮುಂಬೈ ತಂಡ ಪ್ಲೇಆಫ್ ತಲುಪುವ ಸಮೀಕರಣವು ಈ ಎರಡು ಪಂದ್ಯಗಳಿಂದಲೇ ನಿರ್ಧರ ಆಗುತ್ತದೆ. ಅಲ್ಲದೆ ಮುಂಬೈ ತಂಡದ ಈ ಎರಡು ಲೀಗ್ ಪಂದ್ಯಗಳಿಗೆ ವಿಲ್ ಜ್ಯಾಕ್ಸ್ ಲಭ್ಯ ಇರುತ್ತಾರೆ.
ಎಲ್ಲಾದರು ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ ತಲುಪಿದರೆ, ಮುಂಬರುವ ಪಂದ್ಯಗಳಿಗೆ ಜಾನಿ ಬೈರ್‌ಸ್ಟೋವ್ ಕಣಕ್ಕಿಳಿಯಲಿದ್ದಾರೆ. ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲದಿರುವುದು ಇದೇ ಕಾರಣಕ್ಕೆ. ಐಪಿಎಲ್ ಮೆಗಾ ಹರಾಜಿನಲ್ಲಿ ಜಾನಿ ಬೈರ್‌ಸ್ಟೋವ್ ಕೂಡ ತಮ್ಮ ಹೆಸರನ್ನು ನೀಡಿದ್ದರು, ಆದರೆ ಅವರು ಸೇಲ್ ಆಗಲಿಲ್ಲ.
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ)ನಲ್ಲಿ ಆಡುತ್ತಿರುವ ದಕ್ಷಿಣ ಆಫ್ರಿಕಾದ ಆಟಗಾರರನ್ನು ಮೇ 26 ರೊಳಗೆ ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗುರುವಾರ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳಿಗೆ ನಿರ್ದೇಶನ ನೀಡಿದೆ, ಇದರಿಂದಾಗಿ ಕೆಲ ಕ್ರಿಕೆಟಿಗರು ಐಪಿಎಲ್ ಪ್ಲೇಆಫ್‌ಗಳಿಗೆ ಲಭ್ಯವಿಲ್ಲ.