ಬೆಂಗಳೂರು:- ಪತಿಯಿಂದಲೇ ಪತ್ನಿ ಭೀಕರವಾಗಿ ಹತ್ಯೆಯಾಗಿರುವ ಘಟನೆ ಬೆಂಗಳೂರಿನ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಕಲೈವಾಣಿ ಹತ್ಯೆಯಾದ ಮಹಿಳೆ. ರಮೇಶ್ ಹೆಂಡತಿ ಕೊಂದ ಪಾಪಿ ಗಂಡ.
ಬೆಂಗಳೂರಿನಲ್ಲಿ ನಾಳೆ RCB ಮ್ಯಾಚ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರೀ ಬಿಗಿ ಭದ್ರತೆ!
ಇಬ್ಬರೂ ಕೂಡ ಕಳೆದ ಕೆಲ ವರ್ಷದ ಹಿಂದೆ ಎರಡನೇ ವಿವಾಹವಾಗಿದ್ದರು. ಆರೋಪಿ ರಮೇಶ್ ಮರಗೆಲಸ ಮಾಡಿಕೊಂಡಿದ್ದ. ಆರೋಪಿ ರಮೇಶ್ ಗೆ ಅದಾಗಲೇ ಇಬ್ಬರು ಮಕ್ಕಳಿದ್ದರು. ಮಕ್ಕಳ ವಿಷಯವಾಗಿ ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಗಲಾಟೆಯಿತ್ತು. ಗಲಾಟೆ ಜೋರಾಗಿ ಪತ್ನಿಯನ್ನ ರಮೇಶ್ ಮರಗೆಲಸದ ಉಳಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಘಟನೆ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.