ಬೆಂಗಳೂರು: ಅಮೆರಿಕ ಹೇಳಿದ ಹಾಗೆ ಕೇಳುವುದು, ತಿರಂಗಾ ಯಾತ್ರೆ ಮಾಡೋದಷ್ಟೇನಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಮೆರಿಕ ಹೇಳಿದ ಹಾಗೆ ಕೇಳುವುದು, ತಿರಂಗಾ ಯಾತ್ರೆ ಮಾಡೋದಷ್ಟೇನಾ? ನಮ್ಮ ವಿದೇಶಾಂಗ ನೀತಿಗೆ ಯಾರು ಇನ್‌ಚಾರ್ಜ್? ನಮ್ಮ ನೀತಿ ಬಗ್ಗೆ ನಮ್ಮ ಪ್ರಧಾನಿಗಳು ಹೇಳಬೇಕು.
ಇದನ್ನ ತೀರ್ಮಾನ ಮಾಡೋಕೆ ಟ್ರಂಪ್ ಯಾರು? ಆದರೂ ಪದೇ ಪದೇ ಮಾತಾಡ್ತಿದ್ದಾರೆ. ಮೋದಿ ಯಾಕೆ ಮಾತಾಡ್ತಿಲ್ಲ. ಸರ್ವಪಕ್ಷ ಸಭೆಗೆ ಬರುವುದಿಲ್ಲ. ಸಂಸತ್ ಅಧಿವೇಶನ ಕರೆಯರಿ ಅಂದರೆ ಕರೆಯುವುದಿಲ್ಲ. ಯುದ್ಧ ಆಗುವ ಸಮಯದಲ್ಲಿ ಆರ್‌ಎಸ್‌ಎಸ್ ಅವರಿಗೆ ಬ್ರಿಫಿಂಗ್ ಕೊಡ್ತಾರೆ. ಆರ್‌ಎಸ್‌ಎಸ್‌ಗೂ ಇದಕ್ಕೂ ಏನು ಸಂಬಂಧ? ಅವರು ಯಾರು? ಕಿಡಿಕಾರಿದರು.
ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!
ಇದೇ ವೇಳೆ ಕೊತ್ತನೂರು ಮಂಜುನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿ, ಪಾಕಿಸ್ತಾನಕ್ಕೆ ಪಾಠ ಕಲಿಸಬೇಕಾದರೆ ಬೇರು ಸಮೇತ ಭಯೋತ್ಪಾದನೆ ಕಿತ್ತು ಹಾಕಬೇಕಿತ್ತು. ಭಯೋತ್ಪಾದನೆ ಕಿತ್ತು ಬಿಸಾಕುವಾಗ ವಿರಾಮ ಯಾಕೆ ಆಯ್ತು ಹೇಳಬೇಕು. ಸೇನೆ ವಿಷಯ ಬಂದಾಯ ಯಾರು ರಾಜಕೀಯ ಮಾಡಬಾರದು.
ಏನೇ ಇದ್ದರೂ ಕೂಡ ಕೇಂದ್ರ, ಮೋದಿ ಹೇಳಲಿ. ಮಾಹಿತಿ ಕೇಳುವುದರಲ್ಲಿ ತಪ್ಪೇನಿದೆ? ಆಪರೇಷನ್ ಸಿಂಧೂರ ಆದ ಮೇಲೆಯೂ ಪಾಕ್‌ಗೆ ಐಎಮ್‌ಎಫ್‌ನಿಂದ ಸಾಲ ಸಿಕ್ಕಿದೆ. ಆ ಹಣ ಭಯೋತ್ಪಾದಕರಿಗೆ ಕೊಡುತ್ತಾರೆ. ಐಎಮ್‌ಎಫ್ ಕೊಡುವ ಸಾಲವನ್ನು ಭಾರತಕ್ಕೆ ತಡೆಹಿಡಿಯಲು ಆಗಲಿಲ್ಲ. ಏನು ಆಗ್ತಿದೆ ಎನ್ನುವ ಬಗ್ಗೆ ಜನರಿಗೆ ತಿಳಿಸಲಿ ಎಂದು ಹೇಳಿದರು.