ಹುಬ್ಬಳ್ಳಿ:ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನ ಭಾಷೆಯನ್ನು ಬಳಕೆ ಮಾಡುತ್ತೆ ಆದ್ದರಿಂದ ಶಾಸಕ ಕೊತ್ತೂರು ಮಂಜುನಾಥ ಹೇಳಿಕೆ ನೀಡಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಇದು ಪಾಕಿಸ್ತಾನದ ಭಾಷೆ ಆಗಿದ್ದು, ಪಾಕಿಸ್ತಾನದಂತೆ ಕಾಂಗ್ರೆಸ್ ನಾಯಕರು ಮಾತನಾಡುತ್ತಾರೆ
ಪಾಕಿಸ್ತಾನದವರು ಹಿಂದೂ ಟೆರರ್ ಅಂದ್ರೆ ಇಲ್ಲಿನ ಕಾಂಗ್ರೆಸ್ ನವರು ಹಿಂದೂ ಟೆರರ್ ಅಂದ್ರು. ಆರ್ಟಿಕಲ್ 371 ಸಮಯಲ್ಲಿ ಪಾಕಿಸ್ತಾನ ಬ್ಲಾಕ್ ಡೆ ಅಂತು. ಕಾಂಗ್ರೆಸ್ ಸಹ ಬ್ಲಾಕ್ ಡೆ ಅಂತು ಇದೇಲ್ಲಾ ಪಾಕಿಸ್ತಾನಕ್ಕೆ ಸಹಾಯ ಆಗುತ್ತದೆ ನಾವು ಪಾಕಿಸ್ತಾನವನ್ನು ಏಕಾಂಗಿ ಮಾಡಿದ್ದೆವಇಂತಹವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ,
ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!
ಕಾಂಗ್ರೆಸ್ ಅನೇಕ ನಾಯಕರು ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಜನ ವಸತಿಯ ಪ್ರದೇಶದಲ್ಲಿ ಉಗ್ರನ ಒಂದೇ ಮನೆ ಹೊಡೆಯಲಾಗಿದೆ. ಭಾರತದ ಗುಪ್ತಚರ ಇಲಾಖೆ, ಟೆಕ್ನಾಲಜಿ, ಭಾರತೀಯ ಸೇನೆ, ವಾಯುಪಡೆ ಪಡೆ ಯಲ್ಲಿ ಎಷ್ಟು ಬಲವಾಗಿದ್ದುಇದನ್ನು ಪಾಕಿಸ್ತಾನದವರೇ ಅಳುತ್ತಾ ಹೇಳುತ್ತಿದ್ದಾರೆ ನಮಗೆ ಹೊಡೆದ್ರು , ನಮಗೆ ಹೊಡೆದ್ರು ಅಂತ ಅಳತ್ತಾರೆ
ಅಮೇರಿಕಕ್ಕೆ ಹೋಗಿ ಕಾಲು ಬಿದ್ದಿದ್ದಾರೆ.
ಭಾರತದೊಳಗೆ ಇದ್ದವರಿಗೆ ಅನುಮಾನ ಇದೆ ಇವರು ಚುನಾವಣಾ ಆಯೋಗ ನಂಬಲ್ಲಾ, ಸುಪ್ರೀಂ ಕೋರ್ಟ್ ನಂಬಲ್ಲಾ, ಸಂಸತ್ತನ್ನು ನಂಬಲ್ಲಾ, ರಾಷ್ಟ್ರಪತಿ ನಂಬಲ್ಲಾ, ಕೊನೆಗೆ ಸೈನ್ಯದ ಮೇಲೆ ನಂಬಿಕೆ ಇಲ್ಲಾ. ದೇಶದ ಸೈನಿಕರಿಗೆ ಗೌರವ ಸಲ್ಲಿಸಲು ತಿರಂಗಯಾತ್ರೆ ಮಾಡಲಾಗುತ್ತಿದೆ. ಆಪರೇಷನ್ ಸಿಂಧೂರ ಬಗ್ಗೆ ಕೆಲ ಕಾಂಗ್ರೆಸ್ ನವರು ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಅವದಿಯಲ್ಲಿ ಅನೇಕ ಭಯೋತ್ಪಾದಕ ಚಟುವಟಿಕೆಗಳು ನಡೆದಿದ್ದವುಆಗಿನವರು ಇಂತಹ ರಾಜಕೀಯ ಇಚ್ಚಾಶಕ್ತಿ ತೋರಿರಲಿಲ್ಲಾ ಇನ್ನೂಸಚಿವ ಸಂತೋಷ್ ಲಾಡ್ ಗೆ ಪೋಬಿಯಾ ಕಾಡ್ತಿದೆ.
ನಾರ್ಕೋಸಿಟಿಕಾ ಪರ್ಸನಾಲಿಟಿಯಿಂದ ಬಳಲುತ್ತಿದ್ದಾರೆದೊಡ್ಡವರ ಬಗ್ಗೆ ಮಾತನಾಡಿದ್ರೆ ತಾನು ದೊಡ್ಡ ವ್ಯಕ್ತಿಯಾಗ್ತೇನೆ ಅನ್ನೋ ಭ್ರಮೆಯಲ್ಲಿದ್ದಾರೆ ಅವರ ಇಲಾಖೆಯಲ್ಲಿ ಅನೇಕ ಭ್ರಷ್ಟಾಚಾರ ಪ್ರಕರಣಗಳು ನಡೆದಿವೆ. ಅವರು ಅವರ ಜಿಲ್ಲೆ, ರಾಜ್ಯದ ಬಗ್ಗೆ ಮಾತಾಡೋದಿಲ್ಲಾ ಪತ್ರಕರ್ತರು ಪ್ರಶ್ನೆ ಕೇಳಿದರೆ ನೀವು ಬಿಜೆಪಿ ಕಾರ್ಯಕರ್ತರು ಅಂತಾರೆ. ಅನೇಕ ಕಾಂಗ್ರೆಸ್ ನಾಯಕರು ಆಪರೇಷನ್ ಸಿಂಧೂರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಮೊದಲು ಕಾಂಗ್ರೆಸ್ ಏನು ಮಾತಡಬೇಕು ಅಂತ ನಿರ್ಧಾರ ಮಾಡಿಕೊಂಡು ಮಾತನಾಡಲಿ ಎಂದರು.
ಕರ್ನಲ್ ಖುರೇಶಿ ಬಗ್ಗೆ ಬಿಜೆಪಿ ಸಚಿವ ಹೇಳಿಕೆ ವಿಚಾರಅದರ ಬಗ್ಗೆ ಪಕ್ಷ ಸೂಕ್ತ ಕ್ರಮ ಕೈಗೊಂಡಿದ್ದು, ಅಲ್ಲಿನ ಸಿಎಂ ಏನು ಮಾಡಬೇಕೋ ಅದನ್ನು ಮಾಡಿದ್ದಾರೆ ಎಂದರು