ಬೆಂಗಳೂರು: ಬೂಟಾಟಿಕೆಗೆ 4 ಫ್ಲೈಟ್ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ ಎಂದು ಆಪರೇಷನ್ ಸಿಂಧೂರ್ ಬಗ್ಗೆ ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇನ್ನೂ ಈ ವಿಚಾರವಾಗಿ ದೇಶದ ಸ್ವಾಭಿಮಾನ, ಘನತೆ ಮತ್ತು ಸಾರ್ವಭೌಮತೆಯ ಸಂಕೇತವಾದ ಆಪರೇಶನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಸ್ವಲ್ಪವೂ ಗೌರವ ಇಲ್ಲದೆ ನಾಲಿಗೆ ಹರಿಬಿಟ್ಟಿರುವ ಕೋಲಾರದ ಕಾಂಗ್ರೆಸ್ ಶಾಸಕ ಕೊತ್ತನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷ ತಕ್ಷಣ ಪಕ್ಷದಿಂದ ವಜಾ ಮಾಡಬೇಕು ಎಂದು ವಿಧಾನ ಪರಿಷತ್ ಹಿರಿಯ ಶಾಸಕ, ಜೆಡಿಎಸ್ ನಾಯಕ ಟಿ. ಎ.ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!
ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಾರತೀಯ ಮಹಿಳೆಯರ ಕುಂಕುಮ ಅಳಿಸಿದ ಉಗ್ರರ ರಾಕ್ಷಸೀ ಕೃತ್ಯಕ್ಕೆ ತಕ್ಕ ಎದಿರೇಟು ನೀಡಲು ಆಪರೇಶನ್ ಸಿಂಧೂರ ಕಾರ್ಯಾಚರಣೆ ನಡೆಸಲಾಗಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಅಂಥದ್ದರಲ್ಲಿ ಈ ಶಾಸಕರು ಸ್ವಲ್ಪ ವೂ ಮಾನವೀಯತೆಯೇ ಇಲ್ಲದೆ ಬೇಕಾಬಿಟ್ಟಿ ನಾಲಿಗೆ ಹರಿ ಬಿಟ್ಟಿದ್ದಾರೆ. ಈ ಕಾಂಗ್ರೆಸ್ ಶಾಸಕರಿಗೆ ಮಾನ ಮರ್ಯಾದೆ ಇದೆಯೇ ಎಂದು ಶರವಣ ಕೆಂಡ ಕಾರಿದ್ದಾರೆ.
ಸೈನಿಕರನ್ನು ಹೊತ್ತ ನಾಲ್ಕು ವಿಮಾನ ಹೋಗಿ ಬಾಂಬ್ ಹಾಕಿ ಬಂದರೆ ತಕ್ಕ ಪಾಠ ಹೇಗಾಗುತ್ತೆ? ಎಂದು ಕೇಳಿರುವ ಮಂಜುನಾಥ್ ನಿಲುವನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸುತ್ತದೆಯೇ? ಇದು ಕಾಂಗ್ರೆಸ್ ಪಕ್ಷದ ನಿಲುವಾಗಿದೆಯೇ?ಎಂದು ಶರವಣ ಪ್ರಶ್ನಿಸಿದ್ದಾರೆ.ಉಗ್ರರ ಪೈಶಾಚಿಕ ಕೃತ್ಯದಿಂದ ತಮ್ಮ ಪತಿ, ಅಪ್ಪ, ಇಲ್ಲವೇ ಸಹೋದರರನ್ನು ಕಳೆದುಕೊಂಡ ಕುಟುಂಬಗಳ ನೋವು ಈ. ಶಾಸಕರಿಗೆ ಗೊತ್ತಾ? ಅಮೂಲ್ಯ ಜೀವಗಳನ್ನು ಈ ಶಾಸಕ ತಂದುಕೊಡುತ್ತಾರ? ಕಾಂಗ್ರೆಸ್ ಪಕ್ಷ ಈ ಬಗ್ಗೆ ಏನು ಹೇಳುತ್ತೆ? ಎಂದು ಶರವಣ ಪ್ರಶ್ನಿಸಿದ್ದಾರೆ.
ಕರಾವಳಿಯಲ್ಲಿ ನಡೆಯುತ್ತಿರುವ ಹಿಂಸಾಚಾರ, ಸರಣಿ ಕೊಲೆಗಳನ್ನು ನೋಡಿದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ತಾಕತ್ತು ಈ ಸರಕಾರಕ್ಕೆ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಇಲ್ಲೇ ಗುಪ್ತದಳ ವಿಫಲವಾಗಿದೆ. ಅಂಥ ಥದ್ದರಲ್ಲಿ ಈ ಕಾಂಗ್ರೆಸ್ ಶಾಸಕರು ಸೇನೆಯ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ? ಎಂದು ಶರವಣ ಪ್ರಶ್ನೆ ಮಾಡಿದ್ದಾರೆ. ಸೈನಿಕರನ್ನು ಅಪಚಾರ ಮಾಡಿರುವ ಸಿಂಧೂರ ಕಾರ್ಯಾಚರಣೆಯನ್ನು ಅಪಚಾರ ಮಾಡಿ ಗೇಲಿ ಮಾಡಿರುವ ಈ ಶಾಸಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.