ಕತಾರ್‌ನ ಸುಹೀಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ
ಚಿನ್ನದ ಹುಡುಗ ನೀರಜ್ ಚೋಪ್ರಾ ಹೊಸ ಇತಿಹಾಸ ಬರೆದಿದ್ದಾರೆ. ನೀರಜ್ ಅವರು 90.23 ಮೀಟರ್ ಜಾವೆಲಿನ್ ಎಸೆದು ಭಾರತದ ಪರ ಇತಿಹಾಸ ಬರೆದಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಮತ್ತೊಮ್ಮೆ 90 ಮೀಟರ್ ಜಾವೆಲಿನ್ ಎಸೆಯುವ ಮೂಲಕ ತನ್ನ ಹಳೆ ದಾಖಲೆಯನ್ನೇ ಮುರಿದಿದ್ದಾರೆ. ನೀರಜ್ ಚೋಪ್ರಾ 88.44 ಮೀಟರ್ ಜಾವೆಲಿನ್ ಎಸೆದು ಆರಂಭಿಕ ಮುನ್ನಡೆ ಸಾಧಿಸಿದರು. ನೀರಜ್ ಚೋಪ್ರಾ ಕೊನೆಯ ಎಸೆತದಲ್ಲಿ 90.23 ಮೀಟರ್ ದೂರಕ್ಕೆ ಎಸೆದು ದೋಹಾ ಡೈಮಂಡ್ ಲೀಗ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಭಾರತದ ಇನ್ನೋರ್ವ ಕ್ರೀಡಾಪಟು ಕಿಶೋರ್ ಜೆನಾ ಪುರುಷರ ಜಾವೆಲಿನ್ ಥ್ರೋ ಭಾಗಿಯಾಗಿದ್ದರು.