ಮಂಗಳೂರು:- ಬಂಟ್ವಾಳದಲ್ಲಿ ವ್ಯಕ್ತಿ ಮೇಲೆ ತಲ್ವಾರ್ನಿಂದ ಅಟ್ಯಾಕ್ ನಡೆದಿರುವ ಘಟನೆ ಜರುಗಿದೆ.
ಸ್ಥಳೀಯ ನಿವಾಸಿ ಹಮೀದ್ ಹಲ್ಲೆಗೊಳಗಾದ ವ್ಯಕ್ತಿ. ಶುಕ್ರವಾರ ಸಂಜೆ ವೇಳೆಗೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಸದ್ಯ ಹಲ್ಲೆಗೊಳಗಾಗಿರುವ ಹಮೀದ್ನನ್ನ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೇಲ್ನೋಟಕ್ಕೆ ಹ್ಯಾರಿಸ್ ಎಂಬಾತನ ಗ್ಯಾಂಗ್ನಿಂದ ವೈಯಕ್ತಿಕ ದ್ವೇಷಕ್ಕೆ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.