ಹುಬ್ಬಳ್ಳಿ: ಮಹಿಳೆಯರ ಮೇಲೆ ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಮಹಿಳೆಯರ ಮೇಲೆ ದಬ್ಬಾಳಿಕೆಯ ತಡೆಯುವ ಹಾಗೂ ಈ ಕುರಿತು ಜಾಗೃತಿಗಾಗಿ ಮಹಿಳಾ ಸಬಲೀಕರಕ್ಕಾಗಿ ಸೈಕಲ್ ಯಾತ್ರೆ ಆರಂಭಿಸಿರುವ ಪರ್ವತಾರೋಹಿಣಿ ಪಿ. ಸಮೀರಾ ಖಾನ್ ಅವರ ಸೈಕಲ್ ಯಾತ್ರೆ ಹುಬ್ಬಳ್ಳಿಗೆ ಆಗಮಿಸಿದ್ದು ಕಳೆದ ಎರಡು ದಿನಗಳಿಂದ ಇಲ್ಲಿ ಜಾಗೃತಿ ಮೂಡಿಸುತಿದ್ದಾರೆ.
Crime News: ಬಂಟ್ವಾಳದಲ್ಲಿ ವ್ಯಕ್ತಿ ಮೇಲೆ ತಲ್ವಾರ್ನಿಂದ ಅಟ್ಯಾಕ್!
ಆಂಧ್ರ ಪ್ರದೇಶದಿಂದ ಆರಂಭ ಗೊಂಡಿರುವ ಈ ಸೈಕಲ್ ಯಾತ್ರೆ ವಿವಿಧ ಸಂಘ ಸಂಸ್ಥೆ, ಗಣ್ಯರಿಂದ ಸಹಾಯಕ್ಕಾಗಿ ಮನವಿ ಮಾಡತಾ ಇದ್ದುಮಹಿಳೆಯರ ಆರೋಗ್ಯ, ಶಿಕ್ಷಣ, ಸ್ವಾವಲಂಬಿ ಬದುಕಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹಿಮಾಲಯ ಪರ್ವತಾರೋಹಣಕ್ಕೆ ಬೆಂಬಲ ಪಡೆಯಲು ಸಹ ಇದೇ ವೇಳೆ ಸೈಕಲ್ ಯಾತ್ರೆ ನಡೆಸತಾ ಇದ್ದಾರೆ.
ಆಂದ್ರ ಪ್ರದೇಶದಅನಂತಪುರದ ಪರ್ವತಾರೋಹಿ ಪಿ. ಸಮೀರಾ ಖಾನ್ ಯಾತ್ರೆ ಹುಬ್ಬಳ್ಳಿ ತೊಳನಕೆರೆಯಿಂದ ಚಾಲನೆ ನೀಡಲಾಗಿದೆ. ಒಬ್ಬ ಉತ್ಸಾಹಿ ಪ್ರಯಾಣಿಕ ಮತ್ತು ಸೈಕ್ಲಿಸ್ಟ್ ಆಗಿರುವ ಸಮೀರಾಖಾನ್ಇದು ನನ್ನ ಇಲ್ಲಿಯವರೆಗಿನ ಅತ್ಯುತ್ತಮ ಯಾತ್ರೆ ಆಗಿದೆ ಎಂದು ಅವರು ಹೇಳುತ್ತಾರೆ.
“ಪರ್ವತಾರೋಹಣ ಮತ್ತು ಬಂಡೆ ಹತ್ತುವುದರಲ್ಲಿ ಆಸಕ್ತಿ ಹೊಂದಿರುವ ಅನೇಕ ಜನರಿದ್ದಾರೆ. ಪರ್ವತಾರೋಹಣ ಕೋರ್ಸ್ ಮಾಡದಿದ್ದರೂ, ಅನೇಕ ಪರ್ವತಗಳನ್ನು ಹತ್ತುವ ಮೂಲಕ ತರಬೇತಿ ಪಡೆದ ಸಮೀರಾ ಖಾನ್
ಹಿಮಾಲಯ ಪರ್ವತಾರೋಹಣಕ್ಕೆ ತಯಾರಿ ನಡೆಸುತ್ತಿದ್ದು
ಮ2015 ರಿಂದ, ಅವರು 11 ಪರ್ವತಗಳನ್ನು ಹತ್ತಿದ್ದಾರೆ
7 ಶಿಖರಗಳನ್ನು ಏರಿದ್ದು ಇಲ್ಲಿಯವರೆಗೆ 37 ದೇಶಗಳಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ2015 ರಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ನಂತರ ಹೋರಾಟದ ಬದುಕು ನಡೆಸುತ್ತಿರುವ ಸಮೀರಾಪರ್ವತಾರೋಹಣ ಮತ್ತು ಏಕಾಂಗಿ ಹೋರಾಟ ನಡೆಸುತಿದ್ದಾರೆ.
ಕೇವಲ 13 ವರ್ಷದವಳಿದ್ದಾಗ ತನ್ನ ಮೊದಲ ಸೈಕ್ಲಿಂಗ್ ಪ್ರವಾಸವನ್ನು ಕೈಗೊಂಡಿದ್ದಾಳೆ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದು ನಾನು ಯುವತಿಯರಿಗೆ ಹೇಳುವುದು ಇದನ್ನೇ. ಅವರು ದೊಡ್ಡ ಕನಸು ಕಾಣಬೇಕು ಮತ್ತು ಹೊಸ ಹಾದಿಗಳನ್ನು ರೂಪಿಸಬೇಕು ಎಂದು ಬಯಸುತ್ತೇನೆ ಎನ್ನುತ್ತಾರೆ. ಇನ್ನು
ಸಮೀರಾ ಖಾನ್ ಗೆ ರೋಟಗಿ ಕ್ಲಬ್ ಸಾಥ್ ನೀಡಿದ್ದು ಇವರ ಪ್ರಯಾಣ ಯಶಸ್ವಿಯಾಗಲಿ ಎಂಬುದೇ ನಮ್ಮ ಆಶಯ.