ಬೆಂಗಳೂರು: 8 ದಿನಗಳ ಬಳಿಕ ಐಪಿಎಲ್ ಮಹಾ ಸಂಗ್ರಾಮದ ಮರು ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಮರು ಆರಂಭದ ಮೊದಲ ಪಂದ್ಯದಲ್ಲಿ ಮತ್ತದೇ ಕೊಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸವಾಲ್ ಎಸೆಯುತ್ತಿದೆ.
ಬೆಂಗಳೂರಿನ ಚಿನ್ನಸ್ವಾಮಿ ಬ್ಯಾಟಲ್ನಲ್ಲಿ ಆರ್ಸಿಬಿ ಎದುರಿನ ಸೇಡಿಗೆ ಕೊಲ್ಕತ್ತಾ ಸನ್ನದ್ಧವಾಗಿದ್ರೆ, ಇತ್ತ ಗೆಲುವಿನ ನಾಗಲೋಟದ ಕನಸು ಕಾಣ್ತಿರುವ ಆರ್ಸಿಬಿ, ಇವತ್ತೇ ಪ್ಲೇ ಆಫ್ ನೀಡಲು ಹಾತೊರೆಯುತ್ತಿದೆ.
ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ
ಹೀಗಾಗಿ , ಕ್ರೀಡಾಂಗಣದ ಸುತ್ತಮುತ್ತ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದಿಂದ ತೀವ್ರ ಭದ್ರತೆ ಪರಿಶೀಲನೆ ನಡೆಸಲಾಗಿದೆ. ಸ್ಟೇಡಿಯಂ ಸುತ್ತಲಿನ ದೊಡ್ಡ ಮರಗಳನ್ನೂ ಪರಿಶೀಲನೆಗೆ ಒಳಪಡಿಸಲಾಗಿದೆ.
ಇಂದಿನ ಪಂದ್ಯ ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ತುಂಬಾನೇ ವಿಶೇಷ. ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಕೊಹ್ಲಿ ಮುಖ್ಯ ಆಕರ್ಷಣೆಯಾಗಿರಲಿದ್ದಾರೆ.
ಇದರಿಂದ ಹೆಚ್ಚಿನ ಜನ ಸೇರುವ ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಭದ್ರತೆ ಪರಿಶೀಲನೆ ನಡೆಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದೆ. ಸ್ಟೇಡಿಯಂ ಸುತ್ತಮುತ್ತ ಇರುವ ಬೃಹತ್ ಮರಗಳನ್ನೂ ಪರಿಶೀಲಿಸಲಾಗಿದೆ.