ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿಯಲ್ಲಿ ಬಿಜೆಪಿ ಪಕ್ಷದ ನಾಯಕರು, ಮುಖಂಡರ ವತಿಯಂದ ಇಂದು ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದರು.ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ‘ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲಾಗಿತ್ತು.
ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ
ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿಂದು ಮಾಜಿ ಯೋಧರೊಂದಿಗೆ ಜೊತೆಗೂಡಿ ತಿರಂಗಾ ಯಾತ್ರೆ ನಡೆಸಿದರು. ಅಪರೇಷನ್ ಸಿಂಧೂರ ವಿಜಯೋತ್ಸವದಲ್ಲಿ ನೂರಾರೂ ಕಾರ್ಯಕರ್ತರು ಭಾಗಿಯಾಗಿದ್ದರು ಮತ್ತು ಎಲ್ಲರ ಕೈಯಲ್ಲಿ ತಿರಂಗ ರಾರಾಜಿಸುತಿತ್ತು.
ಭಾರತ್ ಮಾತಾ ಕೀ ಜೈ ಘೋಷಣೆ ರಸ್ತೆಯುದ್ದಕ್ಕೂ ಪ್ರತಿಧ್ವನಿಸುತಿತ್ತು. ಮಾಜಿ ಸೈನಿಕರ ಮುಖದಲ್ಲಿ ಮಂದಹಾಸ ಮತ್ತು ನಡಿಗೆಯಲ್ಲಿ ಎಂದಿನ ಆತ್ಮವಿಶ್ವಾಸ ಎದ್ದು ಕಾಣುತಿತ್ತು.