ಮೈಸೂರು: ಕೊತ್ತೂರು ಮಂಜುನಾಥ್ʼಗೆ ಸಿಂಧೂರಕ್ಕೂ ಸಿಂಧೂರಿಗೂ ವ್ಯತ್ಯಾಸವೇ ಗೊತ್ತಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೊತ್ತೂರು ಮಂಜುನಾಥ್ಗೆ ಸಿಂಧೂರಕ್ಕೂ ಸಿಂಧೂರಿಗೆ ವ್ಯತ್ಯಾಸವೇ ಗೊತ್ತಿಲ್ಲ.
ಸಿಂಧೂರ, ಸಿಂಧೂರಿ ಅಂತಾ ಏನೇನೋ ಕಲ್ಪಿಸಿಕೊಂಡು ಕನವರಿಸುತ್ತಿದ್ದಾರೆ. ಮಂಜುನಾಥ್ಗೆ ಭೂಮಿಯ ಚದರ ಅಡಿ ಮಾತ್ರ ಗೊತ್ತಿರೋದು. ಒಂದ್ ಸೈಟ್ ನಾಲ್ಕು ಜನಕ್ಕೆ ಮಾರಿ ದುಡ್ಡು ಮಾಡೋದಷ್ಟೆ ಗೊತ್ತು. ಕೊತ್ತೂರು ಮಂಜುನಾಥ್ ನಿಮಗೆ ದೇಶ, ಯುದ್ಧ ಇದೆಲ್ಲ ನಿಮಗೆ ಅರ್ಥವಾಗಲ್ಲ. ಸುಮ್ಮನೆ ಇರಿ ಟಾಂಗ್ ಕೊಟ್ಟರು.
ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ
ಅಂಬೇಡ್ಕರ್ ಅವತ್ತು ಈ ದೇಶದ ಪ್ರಧಾನಿ ಆಗಿದ್ದರೆ, ದೇಶಕ್ಕೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ. ಮುಸ್ಲಿಮರ ಮನಸ್ಥಿತಿ ಅಂಬೇಡ್ಕರ್ ಅವರಿಗೆ ಬಹಳ ಚೆನ್ನಾಗಿ ಅರ್ಥವಾಗಿತ್ತು. ಅಂಬೇಡ್ಕರ್ ಅವರೇ ಮುಸ್ಲಿಮರ ಮನಸ್ಥಿತಿ ಬಗ್ಗೆ ಬಹಳ ಸ್ಪಷ್ಟವಾಗಿ ಅವತ್ತೆ ಹೇಳಿದ್ರು.
ಅಂಬೇಡ್ಕರ್ ಅವರ ಫೋಟೋವನ್ನು ಗಾಂಧೀಜಿಯ ಜೊತೆಯಲ್ಲಿ ನೋಟ್ನಲ್ಲಿ ಹಾಕಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ. ಬರೀ ಮೀಸಲಾತಿ ದೃಷ್ಟಿಕೋನದಿಂದ ಅಷ್ಟೆ ಅಂಬೇಡ್ಕರ್ ಅವರನ್ನು ನೋಡುವುದ ಬಿಡಿ. ಈಗ ಎಲ್ಲರಿಗೂ ಅಂಬೇಡ್ಕರ್ ಅವರ ವಿಶಾಲ ದೃಷ್ಟಿಕೋನ ಅರ್ಥವಾಗುತ್ತಿದೆ ಎಂದು ತಿಳಿಸಿದರು.