ಬಹಳ ಜನರು ತೊಂಡೆಕಾಯಿ ಒಳಗಿನ ಅಂಟಾದ ದ್ರವದ ಕಾರಣ ಇದನ್ನು ಹೆಚ್ಚಾಗಿ ಸೇವಿಸಲು ಇಷ್ಟ ಪಡುವುದಿಲ್ಲ. ಆದರೆ ಇದರಲ್ಲಿರುವ ಅತ್ಯದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಂಡರೆ ತೊಂಡೆಕಾಯಿ ವಿರುದ್ಧ ಮುಖ ತಿರುಗಿಸಿಕೊಂಡು ಹೋಗಿದ್ದವರು ಸಹ ವಾಪಸ್ ಬಂದು ಕಾಸು ಕೊಟ್ಟು ಖರೀದಿ ಮಾಡುತ್ತಾರೆ. ಹೌದು, ತೊಂಡೆಕಾಯಿಯಲ್ಲಿ ನಮ್ಮ ದೇಹಕ್ಕೆ ಬೇಕಾದ ಅಗಾಧವಾದ ಪೌಷ್ಟಿಕ ಸತ್ವಗಳು ಸೇರಿವೆ. ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕೂಡ ಉಂಟಾಗುತ್ತವೆ.
ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ
ಬೊಜ್ಜು ಕರಗಿಸಲು: ತೊಂಡೆಕಾಯಿ ಬಳ್ಳಿಯ ಕಾಂಡದ ರಸ ಬೊಜ್ಜು ಕರಗಲು ಲಕ್ಷ್ಮಣ ರೇಖೆಯಾಗಿದೆ. ಆಸೆ ಪಟ್ಟು ತಿಂದು ಹೊಟ್ಟೆ ಬೆಳೆಸಿಕೊಂಡವರಿಗೆ ಬೊಜ್ಜು ಕರಗಿಸಲು ಕಷ್ಟ ಪಡುತ್ತಾರೆ. ಬೊಜ್ಜು ಕರಗಿಸಲು ಲಕ್ಷ್ಮಣ ರೇಖೆಯಾಗಿದೆ.
ತೊಂಡೆಕಾಯಿ ಬಳ್ಳಿಯ ಕಾಂಡದ ಎರಡು ಚಮಚ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಂಡು ಕುಡಿದರೆ ಕುಡಿದರೆ ದೇಹದ ಅನಗತ್ಯ ಕೊಬ್ಬು ಕರಗುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಆರೋಗ್ಯಕರ ಹೃದಯಕ್ಕಾಗಿ ತೊಂಡೆಕಾಯಿ ಬಹಳ ಒಳ್ಳೆಯದು ಇದು ನೇರವಾಗಿ ಯಕೃತ್ತಿನ ಜೀವಕೋಶಗಳ ಮೇಲೆ ಕಾರ್ಯನಿರ್ವಹಿಸುತ್ತದೆ . ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ಈ ಸಂಯುಕ್ತಗಳು ಸಹ ಪರಿಣಾಮಕಾರಿಯಾಗಿರುತ್ತವೆ. ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸುತ್ತದೆ.
ಮೂತ್ರಪಿಂಡದ ಕಲ್ಲನ್ನು ತಡೆಯುತ್ತದೆ: ಈ ತರಕಾರಿಯು ಮೂತ್ರಪಿಂಡದ ಕಲ್ಲಿನ ರಚನೆಯನ್ನು ಗಮನಾರ್ಹ ಮಟ್ಟಕ್ಕೆ ತಗ್ಗಿಸಬಹುದು ಎಂದು ಸಾಬೀತಾಗಿದೆ. ಈ ತರಕಾರಿ ಪದಾರ್ಥದ ಸೇವನೆಯು ನಿಯಮಿತವಾಗಿ ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಕರಗಿಸಲು ಮತ್ತು ಹೊರಹಾಕಲು ಸಹಾಯಕ. ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.
ದೇಹದಲ್ಲಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ: ತೊಂಡೆಕಾಯಿಯು ಥೈಯಾಮೈನ್ನ ಶ್ರೀಮಂತ ಮೂಲವಾಗಿದ್ದು, ಇದು ಕಾರ್ಬೋಹೈಡ್ರೇಟ್ ಅನ್ನು ಗ್ಲುಕೋಸ್ ಆಗಿ ಮಾರ್ಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಇದು ದೇಹದಲ್ಲಿ ಶಕ್ತಿಯನ್ನು ಪರಿವರ್ತಿಸುವ ಪ್ರಮುಖ ಉತ್ಪನ್ನವಾಗಿ ಕಾರ್ಯನಿರ್ವಹಿಸುತ್ತದೆ.