ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಬೊಜ್ಜು ಸೇರಿಕೊಂಡರೆ ಅದು ದೇಹದ ಸೌಂದರ್ಯವನ್ನೇ ಹಾಳು ಮಾಡಿ ಬಿಡುತ್ತದೆ. ಯಾವ ಬಟ್ಟೆ ಧರಿಸಿದರೂ ಅಸಹ್ಯವಾಗಿಯೇ ಕಾಣುತ್ತದೆ. ಈ ಬೊಜ್ಜು ಕರಗಿಸಲು ಸುಲಭ ಉಪಾಯ ಇಲ್ಲಿದೆ.
ಕರ್ನಾಟಕದಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ: ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್ ಘೋಷಣೆ!
ಮಹಿಳೆಯರು, ಪುರುಷರು ಎಷ್ಟೇ ದಪ್ಪ ಅದ್ರೂ ಅಷ್ಟೊಂದು ತಲೆ ಕೆಡಿಸಿಕೊಳ್ಳಲ್ಲ, ಅದೇ ಹೊಟ್ಟೆಯ ಬೊಜ್ಜು ಬರಲು ಶುರುವಾದರೆ, ಅಯ್ಯೋ ಹೊಟ್ಟೆ ಬಂದ್ಬಿಟ್ಟಿದೆ ಇದನ್ನು ಕರಗಿಸಲೇ ಬೇಕು ಅಂತಾ ಶತಪ್ರಯತ್ನ ಮಾಡುತ್ತಾರೆ. ದೇಹದ ಯಾವುದೇ ಭಾಗದ ಬೊಜ್ಜನ್ನು ಸ್ವಲ್ಪ ಪ್ರಯತ್ನ ಮಾಡುವ ಮೂಲಕ ಕರಗಿಸಬಹುದು, ಆದರೆ ಈ ಹೊಟ್ಟೆ ಬೊಜ್ಜು ಇದೆಯಲ್ಲಾ ಅದು ಸುಲಭವಾಗಿ ನಮ್ಮ ಮಾತು ಕೇಳೋಲ್ಲ. ಅದಕ್ಕೆ ಸರಿಯಾದ ಆಹಾರ, ಕ್ರಮಬದ್ಧ ವ್ಯಾಯಾಮ ಎಲ್ಲವೂ ಬೇಕಾಗುತ್ತದೆ.
ಪ್ರತಿದಿನ ವ್ಯಾಯಾಮ ಮಾಡಿದರೂ ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ನಿಮ್ಮ ಆಹಾರ ಕ್ರಮದ ಬಗ್ಗೆ ವಿಶೇಷ ಗಮನ ಹರಿಸಬೇಕು. ನಿಮ್ಮ ತೂಕ ಇಳಿಸುವ ಪ್ರಯಾಣ ಹೆಚ್ಚಿಸಲು, ನಿಮ್ಮ ಆಹಾರ ಯೋಜನೆಯಲ್ಲಿ ಕೆಲವು ಗಿಡಮೂಲಿಕೆ ಚಹಾಗಳನ್ನು ಸೇರಿಸಲು ಪ್ರಯತ್ನಿಸಬಹುದು. ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಲು ಯಾವ ರೀತಿಯ ಗಿಡಮೂಲಿಕೆ ಚಹಾ ಸೇವಿಸಬೇಕು ಅನ್ನೋದರ ಬಗ್ಗೆ ತಿಳಿಯಿರಿ.
ನಿಂಬೆ-ಶುಂಠಿ ಚಹಾ
ನಿಂಬೆ ಮತ್ತು ಶುಂಠಿಯಲ್ಲಿರುವ ಎಲ್ಲಾ ಪೋಷಕಾಂಶಗಳು ಹೊಟ್ಟೆಯ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ. ಬೊಜ್ಜು ಕಡಿಮೆ ಮಾಡಲು ನಿಂಬೆ-ಶುಂಠಿ ಚಹಾ ಕುಡಿಯಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ತೂಕ ಇಳಿಸಿಕೊಳ್ಳಲು ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ವ್ಯಾಯಾಮಕ್ಕೂ ಮೊದಲು ಒಂದು ಕಪ್ ನಿಂಬೆ-ಶುಂಠಿ ಚಹಾ ಸೇವಿಸಬಹುದು.
ಪುದೀನ ಚಹಾ
ಹೊಟ್ಟೆಯ ಕೊಬ್ಬಿನಿಂದ ಮುಕ್ತಿ ಪಡೆಯಲು ನೀವು ಪುದೀನಾ ಚಹಾವನ್ನು ಸೇವಿಸಬಹುದು. ಪುದೀನಾದಲ್ಲಿ ಕಂಡುಬರುವ ಅಂಶಗಳು ನಿಮ್ಮ ದೇಹದ ಚಯಾಪಚಯ ಕ್ರಿಯೆ ಹೆಚ್ಚಿಸುವ ಮೂಲಕ ನಿಮ್ಮ ತೂಕ ಇಳಿಸುವ ಪ್ರಯಾಣವನ್ನು ಸುಲಭಗೊಳಿಸಬಹುದು. ಬೇಸಿಗೆಯಲ್ಲಿ ಪುದೀನಾ ಚಹಾ ಕುಡಿಯುವುದರಿಂದ ನಿಮ್ಮ ಕರುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು, ಊಟದ ನಂತರ ಪುದೀನಾ ಚಹಾವನ್ನು ಸೇವಿಸಬೇಕು.
ಗ್ರೀನ್ ಟೀ ಅಥವಾ ಹಸಿರು ಚಹಾ
ಹಸಿರು ಚಹಾವು ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ತ್ವರಿತವಾಗಿ ಕರಗಿಸಲು ಬಯಸಿದರೆ, ನೀವು ಪ್ರತಿದಿನ ಗ್ರೀನ್ ಟೀ ಕುಡಿಯಬಹುದು. ನಿಮ್ಮ ತೂಕ ಇಳಿಸುವ ಪ್ರಯಾಣ ಹೆಚ್ಚಿಸಲು, ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ ನಂತರ ಒಂದು ಕಪ್ ಗ್ರೀನ್ ಟೀ ಕುಡಿಯಿರಿ. ಕೆಲವೇ ವಾರಗಳಲ್ಲಿ ನೀವು ಸಕಾರಾತ್ಮಕ ಫಲಿತಾಂಶಗಳನ್ನು ಕಾಣಬಹುದು.