ಹುಬ್ಬಳ್ಳಿ:- ಏಕಾಏಕಿ ಪ್ರತ್ಯಕ್ಷವಾದ ಚಿರತೆ ಕಂಡು ಸ್ಥಳೀಯರು ಗಾಬರಿಗೊಂಡ ಘಟನೆ ನಗರದ ಗೋಕುಲ ರಸ್ತೆಯಲ್ಲಿ ಭಾರತಿನಗರದಲ್ಲಿ ಜರುಗಿದೆ.
IPL 2025: ಆರ್ ಸಿಬಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್: ಪಂದ್ಯ ನಡೆಯೋದು ಡೌಟ್!
ನಗರದ ಜನಜನಿಬಿಡ ಪ್ರದೇಶದಲ್ಲಿ ತಡರಾತ್ರಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಅಡ್ಡಾಡುವ ದೃಶ್ಯ ಸಿಸಿಟಿವಿ ಸೆರೆಯಾಗಿದೆ. ಜಿಮ್ಯಾಟೋ ಡೆಲಿವರಿ ಭಾಯ್ ಕಣ್ಣಿಗೆ ಚಿರತೆ ಬಿದ್ದಿದ್ದು, ನಾಯಿವೊಂದನ್ನ ಎತ್ತಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆಯಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.