ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗೈದ ಅಧಿಕಾರಿಗಳಿಗೆ ಕೊಡಮಾಡುವ ಅತ್ಯುನ್ನತ ಡಿಜಿ &ಐಜಿಪಿ ಪ್ರಶಸ್ತಿಗೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಭಾಜನಾರಾಗಿದ್ದಾರೆ.
ಆ ಪಾಕಿಸ್ತಾನ ಮುಂಡೇವನ್ನು ನಿಂಬೆಹಣ್ಣು ಹಿಂಡಿದ ಹಾಗೆ ಹಿಂಡಬಹುದು.. ಆದರೆ! – ಸಿಎಂ ಇಬ್ರಾಹಿಂ!
2024- 25ನೇ ಸಾಲಿನ ಡಿಜಿ& ಐಜಿಪಿ ಕಮನ್ಡೇಶನ್ ಡಿಸ್ಕ್ ಪ್ರಶಸ್ತಿಗೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಭಾಜನರಾಗಿದ್ದು, ಪೊಲೀಸ್ ಅಧಿಕಾರಿಯ ಅತ್ಯುತ್ತಮ ಕಾರ್ಯಕ್ಷಮತೆ, ಸಮರ್ಪಣೆ ಹಾಗೂ ಶೌರ್ಯ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ದಂಧೆಗೆ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಕಡಿವಾಣ ಹಾಕಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಎಸ್ಪಿ ಪೃಥ್ವಿಕ್ ಶಂಕರ್ ಜಿಲ್ಲೆಗೂ ಬರುವ ಮೊದಲು ಜಿಲ್ಲೆಯಾಧ್ಯಂತ ಅಕ್ರಮ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದವು. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಇಸ್ಪೀಟು, ಮಟಕಾ, ಮರಳು ದಂಧೆ ಸೇರಿ ಅಕ್ರಮ ದಂಧೆಗೆ ಸಂಪೂರ್ಣ ಕಡಿವಾಣ ಹಾಕುವ ಮೂಲಕ ಜನಮಣನೆ ಗಳಿಸಿದ್ದಾರೆ.
ಇದೆಲ್ಲವನ್ನೂ ಗುರುತಿಸಿ ಪೊಲೀಸ್ ಇಲಾಖೆ ಅತ್ಯುನ್ನತ ಪ್ರಶಸ್ತಿ ನೀಡಿರುವುದು ಎಸ್ಪಿ ಪೃಥ್ವಿಕ್ ಶಂಕರ್ ಅವರ ಶ್ರಮಕ್ಕೆ ಸಿಕ್ಕ ಗೌರವವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗ್ತಾಯಿದೆ.