,ಚಾಮರಾಜನಗರ:- ನಗರದಲ್ಲಿ ಭಾನುವಾರ ಪೂರ್ತಿ ಭಾರೀ ಮಳೆ ಆಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಚಾಮರಾಜನಗರ ಜಿಲ್ಲೆಯ ಬಹುತೇಕ ಕಡೆ ಭಾರೀ ಮಳೆಯಾಗಿದೆ.
ಭಾನುವಾರ ರಾತ್ರಿ ಧಾರಾಕಾರ ಮಳೆ ಆಗಿದೆ. ಸಂಜೆ 5 ಗಂಟೆಗೆ ಪ್ರಾರಂಭವಾದ ಮಳೆ ಸೋಮವಾರ ಮುಂಜಾನೆ 4 ಗಂಟೆವರೆಗೂ ಸುರಿದಿದೆ. ಪೂರ್ವ ಮುಂಗಾರು ಮಳೆಗೆ ರೈತಾಪಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
ಬಹುತೇಕ ಕೆರೆಕಟ್ಟೆಗಳು ನೀರಿನಿಂದ ಆವೃತ್ತವಾಗಿದೆ.