ಹುಬ್ಬಳ್ಳಿ :ಎರಡು ವರ್ಷದಲ್ಲಿ ನೂರಾರು ಗರ್ಭಿಣಿಯರ ಸಾವು ಕಾಂಗ್ರೆಸ್ ಸರ್ಕಾರದ ಸಾಧನೆ ಆಚರಣೆ ಯಾವ ಪುರುಷಾರ್ಥಕ್ಕೆ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ ಬೆಲ್ಲದ ಕಿಡಿ ಕಾರಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಭ್ರಷ್ಟ ಕಾಂಗ್ರೆಸ್ ಗೆ ಸಾಧನಾ ಸಮಾವೇಶ ಮಾಡಲು ಯಾವುದೇ ನೈತಿಕತೆ ಇಲ್ಲ ಕೇವಲ ಲೂಟಿ ಹೊಡೆದು ಏನು ಸಾಧನಾ ಸಮಾವೇಶ ಮಾಡತ್ತಿರಿ.ಈ ಸಾಧನ ಸಮಾವೇಶ ನಾಟಕ ಬಿಡಿ ಅಭಿವೃದ್ಧಿ ಮಾಡಿ ಕೇವಲರಾಜ್ಯದಲ್ಲಿ ಅತೀ ಹೆಚ್ಚು ಸಾಲ ಮಾಡಿ ಅತೀ ಹಿಂದುಳಿದ ರಾಜ್ಯಗಳ ಸಾಲಿಗೆ ರಾಜ್ಯ ಸೇರಿದ್ದು ಇದು ಸಿಎಂ ಸಿದ್ಧರಾಮಯ್ಯನವರ ಸಾಧನೆ ಆಗಿದೆ.
ಈ 3 ರಾಶಿಯವರು ತಾಮ್ರದ ಉಂಗುರ ಧರಿಸುವುದರಿಂದ ಬದಲಾಗುತ್ತೆ ಅದೃಷ್ಟ: ಹಣದ ರಾಶಿಯೇ ಹರಿದು ಬರುತ್ತಂತೆ!
ವಿಧಾನ ಸಭೆಯಲ್ಲಿ ಪ್ರಜಾಪ್ರಭುತ್ವದಲ್ಲಿ ಹೋರಾಟ ಸಹಜಆದ್ರೆ 18 ಶಾಸಕರನ್ನು ಸಭಾಪತಿ ಖಾದರ್ ಅಮಾನತು ಮಾಡಿದ್ದಾರೆ ಈ ಹಿಂದೆ ವಿಧಾನ ಸಭೆಯಲ್ಲಿ ಯೂಟಿ ಖಾದರ್ ಅವರ ಪಕ್ಷದ ಶಾಸಕರು ಸಭಾಪತಿ ಅವರನ್ನು ಪೀಠದಿಂದ ಎತ್ತಿ ಕೆಳಗಿಳಿಸಿದರುಮನಸ್ಸಿಗೆ ಬೇಜಾರ ಆಗಿ ಅವರು ಎರಡು ದಿನದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದರು
ಹೀಗಿದ್ದರೂ ಅಂದು ಶಾಸಕರ ಮೇಲೆ ಯಾವುದೇ ಕ್ರಮವಾಗಿಲ್ಲ,
ಆದರೆ ಬರೀ ಪ್ರತಿಭಟನೆ ಮಾಡಿದ್ದಕ್ಕಾಗಿ ನಮ್ಮ ಶಾಸಕರನ್ನು ಖಾದರ್ ಅಮಾನತು ಮಾಡಿದ್ದಾರೆ. ಈ ಕೂಡಲೇ ನಮ್ಮ ಶಾಸಕರ ಅಮಾನತು ವಾಪಸು ಮಾಡಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಸಭಾಪತಿಗಳ ಸಮಾವೇಶದಲ್ಲಿ ಯೂಟಿ ಖಾದರ್ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರುಕಾನೂನು ಹೋರಾಟ ಸಹ ಮಾಡುತ್ತೆವೆ ಎಂದರು.
ಸ್ಲಿಪರ್ ಸೇಲ್ಸ್ ಆಕ್ಟಿವ್ ಆಗಿರುವ ಬಗ್ಗೆ ಅನುಮಾನ ಇದೆ. ಇತ್ತಿಚಿಗೆ ಹುಬ್ಬಳ್ಳಿ ನಗರದಲ್ಲಿ ಪಾಕಿಸ್ತಾನ ನಿವಾಸಿಗಳಿಂತಿರುವ ಅಪರಿಚಿತ ವ್ಯಕ್ತಿಗಳ ಕಾಣಿಸಿಕೊಂಡಿದ್ದು, ಸ್ಲಿಪರ್ ಸೇಲ್ಸ್ ಆಕ್ಟಿವ್ ಆಗಿರುವ ಬಗ್ಗೆ ಅನುಮಾನ ಇದೆ ಎಂದರು. ಈ ಬಗ್ಗೆ
ಪ್ರಜ್ಞಾವಂತ ನಾಗರಿಕರು ನನಗೆ ಮಾಹಿತಿ ನೀಡಿದ್ದು ಈ ಬಗ್ಗೆ ಮೇ 10 ರಂದು ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದ್ದೆನೆ. ಇದಕ್ಕೂ ಮೊದಲು ಪೋನ್ ಮಾಡಿ ಸಹ ಈ ಬಗ್ಗೆ ಮಾತನಾಡಿದ್ದೆ, ಮೇ 02 ರಿಂದ 10 ರ ತನಕ ಹುಬ್ಬಳ್ಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮೋಬೈಲ್ ಸೀಮ್ ಖರೀದಿ ಮಾಡಲಾಗಿದೆಇದರಿಂದ ಡಿಜಿಟಲ್ ವಾರ್ ಆಗುವ ಸಾಧ್ಯತೆಯಿದೆ.
ಇದರ ತನಿಖೆ ಪೊಲೀಸರು ಮಾಡಬೇಕಿದೆಆದರೆ ಇದನ್ನು ಬಿಟ್ಟು ಪೊಲೀಸ್ ಕಮಿಷನರ್ ವಸೂಲಿದಂಧೆಗಿಳಿದ್ದಾರೆ.
ಯಾರಿಗೆ ಒಬ್ಬರಿಗೆ ಗುಂಡು ಹೊಡೆದು ಹತ್ತು ಜನಕ್ಕೆ ಹೆದರಿಸಲಾಗಿತ್ತಿದೆ.ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮೇಲೆ ಅವರು ಆರೋಪ ಮಾಡಿದರು.ಹುಬ್ಬಳ್ಳಿ ಪೊಲೀಸರು, ರಾಜ್ಯ ಸರ್ಕಾರ ಮುಸ್ಲಿಂ ಪರವಾಗಿ ಕೆಲಸ ಮಾಡುತ್ತಿದೆ. ವೀಸಾ ಇಲ್ಲದ ಪಾಕಿಸ್ತಾನ ಪ್ರಜ್ಞೆಗಳನ್ನು ಎಷ್ಟು ಜನ ಪರಿಶೀಲನೆ ಮಾಡಿದ್ದಿರಿ ಎಂದರು