ಮೈಸೂರು: ರಾಜ್ಯದ ಜನರ ಬದುಕು ಬರ್ಬಾದ್ ಮಾಡಿದ್ದು ಕಾಂಗ್ರೆಸ್ ಪಕ್ಷದ ಸಾಧನೆ ಎಂದು ಕಾಂಗ್ರೆಸ್ ಸರ್ಕಾರದ 2 ವರ್ಷದ ಸಾಧನೆಯ ಚಾರ್ಜ್ ಶೀಟ್ ಬಿಡುಗಡೆ ಮಾಡಿ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು,
ಈ 3 ರಾಶಿಯವರು ತಾಮ್ರದ ಉಂಗುರ ಧರಿಸುವುದರಿಂದ ಬದಲಾಗುತ್ತೆ ಅದೃಷ್ಟ: ಹಣದ ರಾಶಿಯೇ ಹರಿದು ಬರುತ್ತಂತೆ!
ಯಾವ ಪುರುಷಾರ್ಥಕ್ಕೆ ಈ ಸಮಾವೇಶ ಮಾಡ್ತಿದ್ದಾರೆ ಗೊತ್ತಿಲ್ಲ. ಭ್ರಷ್ಟ ಸರ್ಕಾರ ಕೆಲವೆಡೆ 60% ವಸೂಲಿ ಇನ್ನು ಕೆಲವೆಡೆ 100% ವಸೂಲಿ ಮಾಡುತ್ತಿದೆ. ಇದೊಂದು ತುಷ್ಟೀಕರಣ ಮಾಡುವ ಸರ್ಕಾರವಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆ. ರಾಜ್ಯದ ಜನರಿಗೆ ವಿಷ ಕೊಟ್ಟ ಸರ್ಕಾರ ಅಂದ್ರೆ ಅದು ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದರು.