ಬೆಂಗಳೂರು:- ನಗರದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ತಲೆತಗ್ಗಿಸುವ ವಿಚಾರ ಎಂದಿದ್ದಾರೆ.
ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತಾ!? ಹಾಗಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ!
ರಾಜ್ಯ-ದೇಶದ ಬೊಕ್ಕಸಕ್ಕೆ ಬೆಂಗಳೂರಿಗರಿಂದ ದೊಡ್ಡ ಪ್ರಮಾಣದ ಹಣ ಬರುತ್ತದೆ. ಆದರೆ, ಬೆಂಗಳೂರಿಗರ ಬದುಕನ್ನ ನಾವು ಮುಳುಗಿಸುತ್ತಿದ್ದೇವೆ. ಕೆಂಪೇಗೌಡರ ಕಾಲ ಹಾಗೂ ಮದ್ಯದಲ್ಲಿ ಪ್ಲ್ಯಾನಡ್ ಬೆಂಗಳೂರು ಇತ್ತು. ಈಗ ಅನ್ ಪ್ಲ್ಯಾನಡ್ ಬೆಂಗಳೂರಾಗಿದೆ ಎಂದು ಕಿಡಿಕಾರಿದ್ದಾರೆ.
ಕಂದಾಯ ನಿವೇಶನ, ಲೂಟಿ ಹೊಡೆಯಲು ರಾಜಕಾಲುವೆ, ಕೆರೆಗಳನ್ನೇ ನುಂಗಿರೋದು, ರಾಜಕಾಲುವೆ ಒತ್ತುವರಿ ಕೂಡ ದಂಧೆಯಾಗಿದೆ. ಇದೇನಾ ಬ್ರಾಂಡ್ ಬೆಂಗಳೂರು? ಪ್ರತಿವರ್ಷ ಸಾವಿರಾರು ಕೋಟಿ ರೂ. ಹಣ ಹಾಕ್ತೀವಿ, ಈ ಹಣ ಎಲ್ಲಿ ಹೋಗ್ತಿದೆ? ಎಂದು ಪ್ರಶ್ನಿಸಿದ್ದಾರೆ.