ಬೆಂಗಳೂರು: ಸ್ವಾರ್ಥಿಗಳೇ ತುಂಬಿರುವ ಈ ಪ್ರಪಂಚದಲ್ಲಿ ನಾವು ನಮ್ಮದಷ್ಟೇ ಎಂದು ಯೋಚಿಸುವ ಕಾಲಘಟ್ಟವಿದು. ನಾವು, ನಮ್ಮವರು ಚೆನ್ನಾಗಿದ್ರೆ ಸಾಕು ಎಂದು ಬದುಕುವ ಇಂದಿನ ಕಾಲದಲ್ಲಿ ಬೇರೆಯವರಿಗಾಗಿ ಜೈಲಿಗೆ ಹೋದ ಈ ಕಳ್ಳನ ಸ್ಟೋರಿ ಕೊಂಚ ಡಿಪರೆಂಟು. ಎಸ್ ಈತ ಮಾಡಿರೋದು ಕಳ್ಳತನ ಆದ್ರೆ ಈತನ ಉದ್ದೇಶ ಕೇಳಿದ್ರೆ ನೀವೇ ಭೇಷ್ ಅಂತೀರಾ..
ಫಾರಿನ್ ನಲ್ಲಿ ಓದಬೇಕು ಎಂಬ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.. 1 ಕೋಟಿವರೆಗೂ ಎಜುಕೇಷನ್ ಲೋನ್!
ಎಸ್, ಕಳ್ಳತನ ಮಾಡಿ 20 ಮಕ್ಕಳ ಶಾಲಾ, ಕಾಲೇಜು ಫೀಸ್ ಕಟ್ಟಿದ್ದ ಖತರ್ನಾಕ್ ಮನೆಗಳ್ಳರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೇಗೂರು ನಿವಾಸಿ ಶಿವು @ ಶಿವರಪ್ಪನ್ ಈ ಕಳ್ಳತನದ ಮಾಸ್ಟರ್ ಮೈಂಡ್. ಹೆಂಡತಿ, ಮಕ್ಕಳಿಲ್ಲದ ಶಿವು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾಗ ಏರಿಯಾದಲ್ಲಿ ಸ್ನೇಹಿತರು ಮಕ್ಕಳ ಸ್ಕೂಲ್ ಫೀಸ್ ಕಟ್ಟಲು ಪರದಾಡುತ್ತಿರುವುದನ್ನು ನೋಡಿದ್ದ. ಬಳಿಕ ಶಿವು ಬ್ಯಾಡರಹಳ್ಳಿ ಸೇರಿದಂತೆ ಹಲವೆಡೆ ಮನೆಗಳಿಗೆ ಕನ್ನ ಹಾಕಿದ್ದು, ಕದ್ದ ಚಿನ್ನಾಭರಣವನ್ನು ಸ್ನೇಹಿತರಾದ ಅನಿಲ್ @ ಜಗ್ಗ ಮತ್ತು ವಿವೇಕ್ನ ಸಹಾಯದಿಂದ ಮಾರಾಟ ಮಾಡಿದ್ದಾನೆ
ತಮಿಳುನಾಡಿನಲ್ಲಿ 22 ಲಕ್ಷಕ್ಕೆ ಚಿನ್ನ ಮಾರಾಟ ಮಾಡಿಸಿದ್ದ ಶಿವು ಬಂದ ಹಣದಲ್ಲಿ ವಿವೇಕ್ಗೆ 4 ಲಕ್ಷ, ಅನಿಲ್ಗೆ 4 ಲಕ್ಷ ರೂ. ಮೌಲ್ಯದ ಆಟೋ ಕೊಡಿಸಿದ್ದ. ಉಳಿದ 14 ಲಕ್ಷ ರೂ. ಹಣದಲ್ಲಿ ಏರಿಯಾದ 20 ಮಕ್ಕಳಿಗೆ ಶಾಲಾ ಹಾಗೂ ಕಾಲೇಜ್ ಫೀಸ್ ಕಟ್ಟಿದ್ದಾನೆ. ಮನೆಗಳ್ಳರ ಬೆನ್ನತ್ತಿದ್ದ ಬ್ಯಾಡರಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶಿವು, ಅನಿಲ್ ಹಾಗು ವಿವೇಕ್ನನ್ನು ಬಂಧಿಸಿದ ಪೊಲೀಸರು 24 ಲಕ್ಷ ಮೌಲ್ಯದ 260 ಗ್ರಾಂ ಚಿನ್ನದ ಗಟ್ಟಿಯನ್ನು ಸೀಜ್ ಮಾಡಿದ್ದಾರೆ
ನೋಡಿ ಕಳ್ಳತನ ಮಾಡಿರೋದು ತಪ್ಪೇ, ಆದ್ರೆ ಆತನ ಉದ್ದೇಶ ನಿಜಕ್ಕೂ ಮೆಚ್ಚುವಂತದ್ದು…