ಹೈದರಾಬಾದ್ ವಿರುದ್ಧ ಸೋತು ಪ್ಲೇ ಆಫ್ ರೇಸ್ ನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಟೂರ್ನಿಯಿಂದ ಹೊರ ಬಿದ್ದಿದೆ.
ಇವನೊಂಥರ ಡಿಪರೆಂಟು.. ಸ್ನೇಹಿತರ ಮಕ್ಕಳ ಶಾಲಾ ಫೀಸ್ ಗಾಗಿ ಕಳ್ಳತನ ಹಾದಿ ಹಿಡಿದ!
ಅಭಿಷೇಕ್ ಶರ್ಮಾ ಅವರ 20 ಎಸೆತಗಳಲ್ಲಿ 59 ರನ್‌ಗಳ ಸುಂಟರಗಾಳಿ, ಹೆನ್ರಿಚ್ ಕ್ಲಾಸೆನ್ (28 ಎಸೆತಗಳಲ್ಲಿ 47), ಕಮಿಂಡು ಮೆಂಡಿಸ್ (21 ಎಸೆತಗಳಲ್ಲಿ 32 ರನ್‌ಗಳಿಗೆ ನಿವೃತ್ತಿ) ಮತ್ತು ಇಶಾನ್ ಕಿಶನ್ (28 ಎಸೆತಗಳಲ್ಲಿ 35) ಅವರ ಉಪಯುಕ್ತ ಕೊಡುಗೆಗಳ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು.
ಟೂರ್ನಮೆಂಟ್ ನಿಂದ ಹೊರಗುಳಿದ ನಂತರ ರಿಷಭ್ ಪಂತ್ ವಿಚಿತ್ರ ಹೇಳಿಕೆ ನೀಡಿದ್ದಾರೆ. ‘‘ಗಾಯಗಳಿಂದಾಗಿ ನಾವು ಕೆಲವು ನ್ಯೂನತೆಗಳನ್ನು ತುಂಬಬೇಕು ಎಂದು ನಮಗೆ ತಿಳಿದಿತ್ತು. ಒಂದು ತಂಡವಾಗಿ ನಾವು ಅದರ ಬಗ್ಗೆ ಮಾತನಾಡದಿರಲು ನಿರ್ಧರಿಸಿದ್ದೆವು. ಆದರೆ ಅದರ ಉದ್ದೇಶ ನ್ಯೂನತೆಗಳನ್ನು ನಿವಾರಿಸುವುದಾಗಿತ್ತು. ನಾವು ಹರಾಜಿನಲ್ಲಿ ಯೋಜಿಸಿದ ರೀತಿಯಲ್ಲಿಯೇ ಬೌಲಿಂಗ್ ದಾಳಿಯನ್ನು ಹೊಂದಿದ್ದರೆ, ಕಥೆ ಬೇರೆಯೇ ಆಗಿರುತ್ತಿತ್ತು. ಕೆಲವೊಮ್ಮೆ ವಿಷಯಗಳು ನಾವು ಅಂದುಕೊಂಡ ರೀತಿ ನಡೆಯುತ್ತೆ, ಕೆಲವೊಮ್ಮೆ ಹಾಗಗಲ್ಲ’’ ಎಂದಿದ್ದಾರೆ.
ನಾವು ಆಡಿದ ರೀತಿಗೆ ನಮಗೆ ಹೆಮ್ಮೆ ಇದೆ ಮತ್ತು ನಾವು ಸಕಾರಾತ್ಮಕ ಅಂಶಗಳತ್ತ ಗಮನ ಹರಿಸುತ್ತೇವೆ ಎಂದು ಪಂತ್ ಹೇಳಿದರು. ನಮ್ಮಲ್ಲಿ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಇದೆ. ಬೌಲರ್‌ಗಳಿಗೂ ಸಹ, ಅವರು ಉತ್ತಮ ಪ್ರದೇಶಗಳಲ್ಲಿ ಬೌಲಿಂಗ್ ಮಾಡುತ್ತಿದ್ದ ಸಂದರ್ಭಗಳಿದ್ದವು. ನಾವು ಅದರ ಪೂರ್ಣ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದೆವು. ನಮಗೆ ಹತ್ತು ರನ್ ಕಡಿಮೆ ಇದೆ ಎಂದು ತಿಳಿದಿತ್ತು. ನಾವು ಕೆಲವು ಸಂದರ್ಭಗಳಲ್ಲಿ ಚೆನ್ನಾಗಿ ಆಡಿದೆವು ಆದರೆ ಪಂದ್ಯವನ್ನು ಮುಗಿಸಲು ಸಾಧ್ಯವಾಗಲಿಲ್ಲ. ದಿಗ್ವೇಶ್ ರಾಥಿ ಚೆನ್ನಾಗಿ ಆಡಿದ್ದಾರೆ. ಇದು ಅವರ ಮೊದಲ ಸೀಸನ್. ಅವರು ಬೌಲಿಂಗ್ ಮಾಡಿದ ರೀತಿಯನ್ನು ನೋಡುವುದೇ ಚೆನ್ನಾಗಿತ್ತು ಎಂದರು