ಪ್ರಪಂಚದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯುವ ಖರ್ಜೂರಗಳು ಪೋಷಕಾಂಶಗಳ ಆಗರ ಎಂದೇ ಹೇಳಬಹುದು. ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಬಿ 6, ಕಬ್ಬಿಣ ಮತ್ತು ನೈಸರ್ಗಿಕ ಸಿಹಿಕಾರಕಗಳಲ್ಲಿ ಸಮೃದ್ಧವಾಗಿರುವ ಖರ್ಜೂರವು ನಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಅಲ್ಲದೇ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
CERT-In: ಗೂಗಲ್ ಕ್ರೋಮ್, ಬ್ರೌಸರ್ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಎಚ್ಚರಿಕೆ..!
ಖಾಲಿ ಹೊಟ್ಟೆಯಲ್ಲಿ ಯಾರೂ ಖರ್ಜೂರ ಸೇವಿಸುತ್ತಾರೆ ಅವರಿಗೆ ಸುಸ್ತು, ಆಯಾಸ ಮತ್ತು ದುರ್ಬಲತೆ ಎನ್ನುವುದು ಇರುವುದಿಲ್ಲ. ಏಕೆಂದರೆ ಖರ್ಜೂರಗಳಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೇರಳ ವಾಗಿ ಸಿಗುತ್ತದೆ. ಗ್ಲುಕೋಸ್, ಫ್ರಕ್ಟೂಸ್, ಸುಕ್ರೋಸ್ ಹೀಗೆ ಬೇರೆ ಬೇರೆ ರೂಪಗಳಲ್ಲಿ ಇರುವುದರಿಂದ ಎಲ್ಲವೂ ಸಹ ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ಕೊಡುವಲ್ಲಿ ನೆರವಾಗುತ್ತವೆ. ತುಂಬಾ ವೇಗವಾಗಿ ಖರ್ಜೂರಗಳಿಂದ ಈ ಲಾಭಗಳನ್ನು ಪಡೆಯ ಬಹುದು.
ಖರ್ಜೂರಗಳಲ್ಲಿ ನಾರಿನ ಅಂಶ ಹೆಚ್ಚಾಗಿದ್ದು ಇದು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಕರುಳಿನ ಚಟುವಟಿಕೆ ಗಳನ್ನು ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವನೆ ಮಾಡುವುದ ರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ ಮತ್ತು ಬೇರೆ ಬಗೆಯ ಅನಾರೋಗ್ಯಕರ ಆಹಾರಗಳನ್ನು ಸೇವಿಸುವ ಸಾಧ್ಯತೆ ಇಲ್ಲವಾಗುತ್ತದೆ. ಇದರಿಂದ ಆರೋಗ್ಯಕರವಾದ ಜೀರ್ಣಶಕ್ತಿ ನಿಮ್ಮದಾಗುತ್ತದೆ ಮತ್ತು ತೂಕ ನಿರ್ವಹಣೆ ಕೂಡ ಸಾಧ್ಯ ವಾಗುತ್ತದೆ.
ಹೈದರಾಬಾದ್ ವಿರುದ್ಧ ಸೋತು ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಲಕ್ನೋ.. ಕ್ಯಾಪ್ಟನ್ ಕೊಟ್ಟ ಸಮರ್ಥನೆ ಹೀಗಿದೆ!
ಖರ್ಜೂರಗಳಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು, ಅಂದರೆ ಪೊಟ್ಯಾಶಿಯಂ, ಮೆಗ್ನೀಷಿಯಂ, ಕಬ್ಬಿಣ, ವಿಟಮಿನ್ ಬಿ6 ಮತ್ತು ಇನ್ನಿತರ ಸತ್ವಗಳು ಯಥೇಚ್ಛವಾಗಿ ಸಿಗುತ್ತವೆ. ಇವುಗಳು ದೇಹದ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ತಮ್ಮದೇ ಆದ ಪಾತ್ರವನ್ನು ಹೊಂದಿರುತ್ತವೆ. ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಉಪಯೋಗ ಜಾಸ್ತಿ.
ಖರ್ಜೂರ ನಿಮಗೆಲ್ಲ ಗೊತ್ತಿರುವ ಹಾಗೆ ತಿನ್ನಲು ಸಿಹಿಯಾಗಿ ರುತ್ತದೆ. ಅಂದರೆ ನಿಸರ್ಗದತ್ತವಾಗಿ ಇದರಲ್ಲಿ ಸಕ್ಕರೆ ಅಂಶ ಮೊದಲೇ ಇರುತ್ತದೆ.
ಸಿಹಿ ಅಂಶವನ್ನು ಬೇಡುವ ವಿವಿಧ ಆಹಾರ ಪದಾರ್ಥ ಗಳಲ್ಲಿ ನೀವು ಖರ್ಜೂರವನ್ನು ಸೇರಿಸಿ ಸೇವಿಸ ಬಹುದು. ಅಷ್ಟೇ ಅಲ್ಲದೆ ಬೇರೆ ಬಗೆಯ ಆಹಾರಗಳಲ್ಲಿ ಹೆಚ್ಚು ವರಿಯಾಗಿ ಸಿಗುವ ಸಕ್ಕರೆ ಪ್ರಮಾಣವನ್ನು ಸೇವಿಸುವ ಸಾಧ್ಯತೆ ಯಿಂದ ತಪ್ಪಿಸಿಕೊಳ್ಳ ಬಹುದು.
ಖರ್ಜೂರಗಳಲ್ಲಿ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿ ಸಿಗುತ್ತವೆ.ಇದರಲ್ಲಿ ಸಿಗುವ ಫಿನೋಲಿಕ್ ಆಮ್ಲ ದೈಹಿಕ ಆಕ್ಸಿಡೆ ಟೀವ್ ಒತ್ತಡವನ್ನು ನಿರ್ವಹಣೆ ಮಾಡುವಲ್ಲಿ ಕೆಲಸ ಮಾಡುತ್ತದೆ.
ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಖರ್ಜೂ ರವನ್ನು ಸೇವಿಸುವುದರಿಂದ ನಿಮಗೆ ಈ ಲಾಭ ಗಳು ಪೂರ್ಣ ಪ್ರಮಾಣದಲ್ಲಿ ಸಿಗುತ್ತವೆ. ಇವುಗಳ ಸೇವ ನೆಯಿಂದ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು.