ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ೧ ಪವಿತ್ರಗೌಡ, ಎ೨ ದರ್ಶನ್ ಬೆಂಗಳೂರಿನ 57ನೇ CCH ಕೋರ್ಟ್ಗೆ ಇಂದು ಹಾಜರಾಗಿದ್ದಾರೆ. ಆರೋಪಿ ದರ್ಶನ್ ನನ್ನು ನಟ ಧನ್ವೀರ್ ಕೋರ್ಟ್ ಗೆ ಕರೆದುಕೊಂಡು ಬಂದಿದ್ದಾರೆ. ಕಳೆದ ಬಾರಿ ಬೆನ್ನು ನೋವಿನ ನೆಪ ಹೇಳಿ ಕೋರ್ಟ್ ಗೆ ದರ್ಶನ್ ಗೈರಾಗಿದ್ದರು. ಕೋರ್ಟ್ ಖಡಕ್ ವಾರ್ನಿಂಗ್ ಬೆನ್ನಲ್ಲೇ ಈ ಬಾರಿ ಕೋರ್ಟ್ ಗೆ ಹಾಜರಾಗಿದ್ದಾರೆ.
ದರ್ಶನ್ ನಿನ್ನೆಯಷ್ಟೇ ಬಾಲಿಯಲ್ಲಿ ಪತ್ನಿ ವಿಜಯಲಕ್ಷ್ಮಿ ಜೊತೆ 22ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಹಾಡು ಹಾಡಿ ಪತ್ನಿ ಜೊತೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು.