ಗದಗ: ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಮುಗಳಿ ಗ್ರಾಮದ ಬಳಿ ಜಮೀನೊಂದರ ಬಾವಿಯಲ್ಲಿ ಪತ್ತೆಯಾಗಿದೆ. ರೋಣ ಪಟ್ಟಣದ ನಿವಾಸಿ ಶಂಕ್ರಪ್ಪ @ ಮುತ್ತಪ್ಪ ಕೊಳ್ಳಿ (30) ಕೊಲೆಯಾದ ದುರ್ದೈವಿಯಾಗಿದ್ದು,
ಮುಖಕ್ಕೆ ಚಾದರ ಕಟ್ಟಿ, ಎದೆ ಹಾಗೂ ಕುತ್ತಿಗೆ ಭಾಗಕ್ಕೆ ವೇಲ್ ಕಟ್ಟಿ ದುಷ್ಕರ್ಮಿಗಳು ಶವ ಎಸೆದು ಎಸ್ಕೇಪ್ ಆಗಿದ್ದಾರೆ. ಐದು ದಿನಗಳ ಹಿಂದೆ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕಿಡ್ನಿ ಸ್ಟೋನ್ ನೋವಿಲ್ಲದೇ ಕರಗಿ ಹೋಗ್ಬೇಕಾ!? ಹಾಗಿದ್ರೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿರಿ, ರಿಸಲ್ಟ್ ಗ್ಯಾರಂಟಿ!
ಮೃತ ವ್ಯಕ್ತಿಯ ಪತ್ನಿ ನೀಡಿದ್ದ ದೂರಿನ ಅನ್ವಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಕೈಗೊಂಡಾಗ ವ್ಯಕ್ತಿಯ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ.
ನಿನ್ನೆ ಸಂಜೆ ರೋಣ ಪಿಎಸ್ಐ ಪ್ರಕಾಶ್ ಬಣಕಾರ, ಕುಟುಂಬಸ್ಥರ ಸಮ್ಮುಖದಲ್ಲಿ ಕ್ರೇನ್ ಮೂಲಕ ಬಾವಿಯಲ್ಲಿನ ಶವವನ್ನು ಹೊರತೆಗೆಯಲಾಗಿದೆ.