ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಪಟ್ಟಂತೆ ಇಂದು ಕೊಲೆ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾಮುಖಿಯಾಗಿದ್ದಾರೆ. ಕಳೆದ ಬಾರಿ ಬೆನ್ನು ನೋವಿನ ನೆಪ ಹೇಳಿ ಕೋರ್ಟ್ ಗೆ ಗೈರಾಗಿದ್ದ ದಾಸ ಈ ಬಾರಿ ಕೋರ್ಟ್ ಹಾಜರಾಗಿದ್ದರು. ಇಂದು 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಇಂದು ಪವಿತ್ರಾ ಗೌಡ, ನಟ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳು ಹಾಜರಾಗಿದ್ದರು. ವಿಚಾರಣೆ ಶುರುವಾಗುತ್ತಿದ್ದಂತೆ ದರ್ಶನ್-ಪವಿತ್ರಾ ದೂರ ದೂರ ನಿಂತಿದ್ದರು. ಈ ವೇಳೆ ಜಡ್ಜ್ ಆರೋಪಿ ಸಂಖ್ಯೆಗೆ ಅನುಗುಣವಾಗಿ ನಿಲ್ಲುವಂತೆ ಸೂಚಿಸಿ ಪವಿತ್ರಾ ಗೌಡ ಬಳಿ ನಿಲ್ಲಲು ಹೇಳಿದರು. ಜಡ್ಜ್ ಸೂಚನೆಯ ನಂತರ ದರ್ಶನ್ ಪವಿತ್ರಾ ಗೌಡ ಬಳಿ ಬಂದು ನಿಂತುಕೊಂಡರು. ಕೋರ್ಟ್ನಲ್ಲಿ ಪರಸ್ಪರ ಮಾತನಾಡದ ಸುಬ್ಬ ಸುಬ್ಬಿ ಲಿಫ್ಟ್ನಲ್ಲಿ ಮಾತನಾಡಿದ್ದಾರೆ.
ಸುಬ್ಬ ಸುಬ್ಬಿ ಲಿಫ್ಟ್ ನಲ್ಲಿ ಪರಸ್ಪರ ಮಾತನಾಡಿದ್ದಾರೆ. ದರ್ಶನ್ ದುಂಬಾಲು ಬಿದ್ದು ಮಾತನಾಡಿಸಿರುವ ಪವಿತ್ರಾ ಗೌಡ ಇದೇ ವೇಳೆ ಫೋನ್ ನಂಬರ್ ಗಾಗಿ ಸತಾಯಿಸಿದ್ದಾರೆ. ಕೈ ಹಿಡಿದು ಫೋನ್ ನಂಬರ್ ಕೊಡುವಂತೆ ಪೀಡಿಸಿದ್ದಾರೆ. ಕೊನೆಯೂ ಗೌಡ್ತಿ ದರ್ಶನ್ ಹೊಸ ನಂಬರ್ನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ವತಃ ದರ್ಶನ್ ಪವಿತ್ರಾಗೌಡಗೆ ನಂಬರ್ ಡಯಲ್ ಮಾಡಿಕೊಟ್ಟಿದ್ದಾರೆ.
ಕೊಲೆ ಕೇಸ್ ಬಳಿಕ ಸುಬ್ಬ-ಸುಬ್ಬಿ ದೂರ!
ರೇಣುಕಾಸ್ವಾಮಿ ಕೊಲೆನಡಿ ಜೈಲು ಸೇರಿದ್ದ ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಪಡೆದು ಹೊರಬಂದಿದ್ದಾರೆ. ಜಾಮೀನು ಪಡೆದು ಹೊರಬಂದಮೇಲೆ ಸುಬ್ಬ ಸುಬ್ಬಿ ದೂರವಾಗಿದ್ದರು. ನಾನೊಂದು ತೀರಿ ನೀನೊಂದು ತೀರ ಎಂದು ಅಂತರ ಕಾಯ್ದುಕೊಂಡಿದ್ದರು. ವಿಜಯಲಕ್ಷ್ಮಿ ದರ್ಶನ್ ಸುತ್ತಮುತ್ತ ಇದ್ದ ಗ್ಯಾಂಗ್ ಕೋಕ್ ಕೊಟ್ಟಿದ್ದರು. ಇದೀಗ ಪವಿತ್ರಾಗೌಡ ಮತ್ತೆ ದರ್ಶನ್ ನಂಬರ್ ಪಡೆದುಕೊಂಡಿದ್ದಾರೆ. ಸುಬ್ಬ ಸುಬ್ಬಿ ಮತ್ತೆ ಕನೆಕ್ಟ್ ಆಗ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.