ಏಕ್ ಲವ್ ಯಾ ಸಿನಿಮಾ ಮೂಲಕ ಕನ್ನಡ ಸಿನಿಮಾಪ್ರೇಮಿಗಳಿಗೆ ಪರಿಚಿತರಾದ ನಟಿ ರೀಷ್ಮಾ ನಾಣಯ್ಯ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೆಡಿ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಿನಿಮಾ ಬಿಡುಗಡೆ ಜೊತೆಗೆ ರೀಷ್ಮಾ ಸಹೋದರಿ ಮದುವೆಯಲ್ಲಿ ಫುಲ್ ಮಿಂಚಿದ್ದಾರೆ. ರೀಷ್ಮಾ ನಾಣಯ್ಯ ಅಕ್ಕ ಇತ್ತೀಚೆಗಷ್ಟೇ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಕೊಡವ ಸಮಾಜದಲ್ಲಿ ಮದುವೆ ಸಮಾರಂಭ ನಡೆದಿದೆ.
ರೀಷ್ಮಾ ನಾಣಯ್ಯ ಸಹೋದರಿ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಪುತ್ರ ಅನಿರುದ್ದ ಅವರನ್ನು ವರಿಸಿದ್ದಾರೆ. ಪ್ರೀತಿ ಅಕ್ಕನ ಮದುವೆಯನ್ನು ಮುಂದೆ ನಿಂತು ರೀಷ್ಮಾ ಮಾಡಿಸಿಕೊಟ್ಟಿದ್ದಾರೆ. ಅಕ್ಕ ಮದುವೆಯಲ್ಲಿ ನಟಿ ಫುಲ್ ಗ್ರ್ಯಾಂಡ್ ಆಗಿ ರೆಡಿಯಾಗಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮದುವೆಯಾಗಿದ್ದಾರೆ.