ಹುಬ್ಬಳ್ಳಿ: ರೀಲ್ಸ್ಗಾಗಿ ರೈಲಿನಲ್ಲಿಯೇ ಕುಣಿದು ಕುಪ್ಪಳಿಸಿದ ರೇಲ್ವೆ ಇಲಾಖೆಯ ರೈಲ್ವೆ ಟಿಕೆಟ್ ಪರೀಕ್ಷಕರು ಅಂದ್ರೆ (ಟಿಟಿಇ)ಗಳು ಇದು ಹುಬ್ಬಳ್ಳಿ ವಂದೇ ಭಾರತ್ ರೈಲಿನಲ್ಲಿ ನಡೆದಿದ್ದು,ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು,,,, ಕರ್ತವ್ಯದ ಮೇಲೆ ಇರುವಾಗಲೇ ನರ್ಸ್ಗಳು, ವೈದ್ಯಕೀಯ ವಿದ್ಯಾರ್ಥಿಗಳು, ಬಸ್ ಚಾಲಕರು ರೀಲ್ಸ್ಗಾಗಿ ನೃತ್ಯ ಮಾಡಿದ ಪ್ರಕರಣಗಳು ಇನ್ನು ಹಚ್ಚ ಹಸಿರು. ಈಗಿರುವಾಗಲೇ ರೈಲ್ವೆ ಇಲಾಖೆಯ ರೈಲ್ವೆ ಟಿಕೆಟ್ ಪರೀಕ್ಷಕರು ಅಂದ್ರೆ (ಟಿಟಿಇ)ಗಳು ರೈಲಿನಲ್ಲಿಯೇ ಕುಣಿದು ಕುಪ್ಪಳಿಸಿದ ವಿಡಿಯೋಗಳು ಸಾಕಷ್ಟು ಸದ್ದು ಮಾಡುತ್ತಿದೆ.
ಇತ್ತೀಚೆಗೆ ಕೆಲಸದ ವೇಳೆಯಲ್ಲಿ ಐದಾರು ಜನ ಟಿಟಿಇಗಳು ಚಲಿಸುತ್ತಿರುವ ವಂದೇ ಭಾರತ್ ರೈಲೊಂದರಲ್ಲಿ ಡಾನ್ಸ್ ಮಾಡಿ ಮೋಜು ಮಸ್ತಿ ಮಾಡಿದ್ದಾರೆ. ಈ ರೀತಿ ತೊಡಗಿರುವುದು ಸರಿಯೇ ಎಂಬ ಪ್ರಶ್ನೆ ಜೊತೆಗೆ ವ್ಯಾಪಕ ಟೀಕೆಗಳು ಮೂಡುತ್ತಿವೆ.
ರೈಲ್ವೆ ಇಲಾಖೆ ದೊಡ್ಡ ಪ್ರಮಾಣದಲ್ಲಿ ರೈಲ್ವೆ ಟಿಕೆಟ್ ಪರೀಕ್ಷಕರ(ಟಿಟಿಇ) ಕೊರತೆ ಎದುರಿಸುತ್ತಿದೆ. ಇದೇ ಕಾರಣಕ್ಕೆ ಹಲವು ರೈಲುಗಳು ಟಿಟಿಇಗಳಿಲ್ಲದೇ ಸಂಚರಿಸುತ್ತವೆ.
ಸಿಬ್ಬಂದಿ ಕೊರತೆ ಪರಿಣಾಮ ಎಲ್ಲ ರೈಲುಗಳ ಟಿಕೆಟ್ ಪರಿಶೀಲನೆ ಕಷ್ಟ ಸಾಧ್ಯ ಎನ್ನುವ ಮಾತುಗಳನ್ನು ರೈಲ್ವೆ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಆದ್ರೆ ಇದಕ್ಕೆ ವ್ಯತರಿಕ್ತ ಎನ್ನುವಂತೆ ಇತ್ತೀಚೆಗೆ ಹುಬ್ಬಳ್ಳಿ ಪುಣೆ ವಂದೇ ಭಾರತ್ ರೈಲಿನಲ್ಲಿ ಪುರುಷ ಮಹಿಳೆಯರು ಸೇರಿ ಆರೇಳು ಟಿಟಿಇಗಳು ಒಂದೆಡೆ ಸೇರಿ ಮೋಜು ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋಗಳಲ್ಲಿ ರೈಲ್ವೆಯ ಒಂದೇ ಕೋಚ್ನಲ್ಲಿ ಹಿರಿಯ ಟಿಟಿಇಯೊಬ್ಬರು ಮಹಿಳಾ ಟಿಟಿಇ ಗಳೊಂದಿಗೆ ಡಾನ್ಸ್ ಮಾಡಿದ್ದಾರೆ.
ಅಲ್ಲದೇ ಮಹಿಳಾ ಟಿಟಿಇ ಮತ್ತು ಇತರ ಸಿಬ್ಬಂದಿಯನ್ನು ಕೈ ಹಿಡಿದು ಎಳೆದು ತಂದು ಕುಣಿಯುವಂತೆ ಪ್ರಚೋದಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಸಹಜವಾಗಿ ರೈಲ್ವೆ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.
ಇವರು ರೈಲ್ವೆ ಸಮವಸ್ತ್ರದಲ್ಲಿಯೇ ಬಾಲಿವುಡ್ ಮತ್ತು ಟಾಲಿವುಡ್ ಹಾಡುಗಳಿಗೆ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಎಲ್ಲ ಟಿಟಿಇಗಳು ಅದರಲ್ಲೂ ಮಹಿಳಾ ಟಿಟಿಇಗಳೊಂದಿಗೆ ಒಂದೆಡೆ ಸೇರಿ ಕುಣಿಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ..? ಈ ಹಿಂದೆ ಬೆಂಗಳೂರಲ್ಲಿ ರೈಲಿನಲ್ಲಿ ಹಾಡುಗಳಿಗೆ ಹೆಜ್ಜೆ ಹಾಕಿದ್ದ ಟಿಟಿಇಯೊಬ್ಬರನ್ನು ಅಮಾನತು ಮಾಡಲಾಗಿತ್ತು. ಈ ಬಗ್ಗೆ ಮೇಲಾಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.