Close Menu
Ain Live News
    Facebook X (Twitter) Instagram YouTube
    Tuesday, May 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ರೋಗಗಳಿಂದ ಮುಕ್ತಿ ಹೊಂದಲು ಯೋಗ: ಡಾ. ಸಿ.ಎನ್ ಮಂಜುನಾಥ್

    By Author AINMay 20, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಯೋಗವೊಂದು ಉತ್ತಮ ಆರೋಗ್ಯದ ಕೈಪಿಡಿ, ಯೋಗವನ್ನು ಅಳವಡಿಸಿಕೊಂಡರೆ ಆರೋಗ್ಯಯುತ ಜೀವನವನ್ನು ಕಾಣಬಹುದು ಎಂದು ಬೆಂಗಳೂರು ಗ್ರಾಮಾಂತರ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರು ಹೇಳಿದರು. ಜೂನ್‌ನಲ್ಲಿ ಆಚರಿಸಲಾಗುವ ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ಪೂರ್ವಭಾವಿಯಾಗಿ ಲೈಫ್ ಎಟರ್ನಲ್ ಟ್ರಸ್ಟ್ ನ ಆಯೋಜನೆಯಲ್ಲಿ, ಸಹಜ ಯೋಗ ಸಂಸ್ಥೆಯು ಸಾರ್ವಜನಿಕರಲ್ಲಿ ಯೋಗ ಕುರಿತು ಜಾಗೃತಿ ಮೂಡಿಸಲು ಹಾಗೂ ಧ್ಯಾನದ ಮಹತ್ವ ತಿಳಿಸಿ ಕೊಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಚರಿಸಲು ಸಿದ್ಧವಾಗಿರುವ ಮೊಬೈಲ್ ವಾಹನಕ್ಕೆ ಪದ್ಮನಾಭನಗರದಲ್ಲಿ ಡಾ. ಸಿ.ಎನ್. ಮಂಜುನಾಥ್ ಅವರು ಚಾಲನೆ ನೀಡಿದರು.

    ಕಿಡ್ನಿ ಸ್ಟೋನ್ ನೋವಿಲ್ಲದೇ ಕರಗಿ ಹೋಗ್ಬೇಕಾ!? ಹಾಗಿದ್ರೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿರಿ, ರಿಸಲ್ಟ್ ಗ್ಯಾರಂಟಿ!

    ಈ ವೇಳೆ ಮಾತನಾಡಿದ ಅವರು, ಯೋಗ ಎನ್ನುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಪ್ರಕ್ರಿಯೆ. ಏಕೆಂದ್ರೆ ಔಷಧ ಅಲ್ಲದ ಔಷಧಿಯ ಗುಂಪಿನ ಪಟ್ಟಿಯಲ್ಲಿ ಯೋಗ ಮತ್ತು ಧ್ಯಾನ ಸೇರುತ್ತದೆ. ಈ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲೀಕರಣ ಕಾಲಘಟ್ಟದಲ್ಲಿ ನಾವು ಯಂತ್ರಗಳಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನ ಮಾಡುವ ಮೂಲಕ ನಮ್ಮ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬಹುದು.

    ಮನಸ್ಸು, ಮೆದುಳು ಹಾಗೂ ದೇಹವನ್ನು ಒಗ್ಗೂಡಿಸುವ ಗಂಗೋತ್ರಿಯೆಂದರೆ ಅದು ಯೋಗ. ಲೈಫ್ ಎಟರ್ನಲ್ ಟ್ರಸ್ಟ್ನ ಆಯೋಜನೆಯಲ್ಲಿ ಮಾತಾಜಿ ನಿರ್ಮಲಾದೇವಿಯವರ ಸಹಜ ಯೋಗ ಸಂಸ್ಥೆಯ ಸದಸ್ಯರು ಇಂದು ಯೋಗದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೊಬೈಲ್ ವ್ಯಾನ್ ಸೇವೆಗೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಡಾ. ಸಿ.ಎನ್. ಮಂಜುನಾಥ್ ಅವರು ಅಭಿಪ್ರಾಯಪಟ್ಟರು.

    ಯೋಗ ಮತ್ತು ಧ್ಯಾನದ ಕುರಿತು ನಗರ ಪ್ರದೇಶದಲ್ಲಿನ ಮಂದಿಗೆ ಅರಿವಿದೆ ಆದ್ರೆ ಹಳ್ಳಿಗಾಡಿನ ಪ್ರದೇಶದಲ್ಲಿ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಸಹಜ ಯೋಗ ಸಂಸ್ಥೆ ಮುಂದಾಗಿದೆ. ಹಳ್ಳಿ ಹಳ್ಳಿಗೆ ಮೊಬೈಲ್ ವ್ಯಾನ್ ಮೂಲಕ ತಲುಪಿ ಜನರಲ್ಲಿ ಯೋಗದಿಂದಾಗುವ ಲಾಭದ ಕುರಿತು ಪ್ರಚಾರ ಮಾಡಲು ಸಹಜ ಯೋಗ ಸಂಸ್ಥೆ ಪಣತೊಟ್ಟಿದೆ. ಒಂದು ಮಾತಿದೆ ʼಔಷಧದಲ್ಲಿ ಯಾವುದೇ ಸಂತೋಷವಿಲ್ಲ, ಆದ್ರೆ ಸಂತೋಷವೇ ಔಷಧ” ಎಂದು ಹೇಳಲಾಗುತ್ತದೆ.

    ಹಾಗಾಗಿ ನಾವು ನಮ್ಮ ದಿನಚರಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ಇಂಗ್ಲೀಷ್ನಲ್ಲಿ ಹೇಳುವಂತೆ ಯೋಗ ಕಾಸಸ್ ಬ್ರೈಟನಿಂಗ್ ಆಫ್ ದಿ ಫೇಸ್, ಸ್ಪಾರ್ಕ್ಲಿಂಗ್ ಆಫ್ ಐಸ್, ರೂಲಿಂಗ್ ಆಫ್ ದಿ ಮೈಂಡ್, ವಾರ್ಮಿಂಗ್ ಆಫ್ ದಿ ಹಾರ್ಟ್ ಎಂದು. ಯೋಗ ಮಾಡುವುದರಿಂದ ಹೃದಯದ ಆರೋಗ್ಯ, ಸಕ್ಕರೆ ಕಾಯಿಲೆ ನಿಯಂತ್ರಣ ಸೇರಿದಂತೆ ಹಲವಾರು ಲಾಭಗಳಿವೆ. ಇಂದು ಜೀವನಶೈಲಿಯ ಆಧಾರಿತ ಕಾಯಿಲೆಗಳಿಂದ ಭಾರತದಲ್ಲಿ ಶೇ.60ರಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆ ಎಲ್ಲರೂ ಸಂತೃಪ್ತಿ, ಮನಃಶಾಂತಿಯನ್ನು ಹುಡುಕುತ್ತಿದ್ದಾರೆ.

    ಯೋಗದಿಂದ ಏಕಾಗ್ರತೆ ಸಿಗಲಿದೆ, ಹೃದಯದ ಬಡಿತ ಹಿಡಿತಕ್ಕೆ ಬರಲಿದೆ. ಹೃದಯದ ಬಡಿತ ನಿಯಂತ್ರಣದಲ್ಲಿದ್ದಷ್ಟು ಹೆಚ್ಚು ಕಾಲ ಬದುಕಬಹುದು. ಹಾಗಾಗಿ ಯೋಗವನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ಈ ಪರಿಸರದಲ್ಲಿ ಒಂದು ಡಜನ್ ಔಷಧವಲ್ಲದ ಔಷಧಗಳಿವೆ. ಅವುಗಳೆಂದರೆ ಬಿಸಿಲಿನಲ್ಲಿ ಕಾಲ ಕಳೆಯುವುದು, ವ್ಯಾಯಾಮ, ಆಗಾಗ್ಗೆ ಉಪವಾಸ, ನಿದ್ದೆ, ನಗು, ಕೃತಜ್ಞತೆ, ಸ್ನೇಹ ಬಳಗವನ್ನು ಕಟ್ಟಿಕೊಳ್ಳುವಂತದ್ದು, ಇತರರೊಂದಿಗೆ ಮಾತುಕತೆ, ತರಕಾರಿ ಹಾಗೂ ಹಣ್ಣುಗಳ ಸೇವನೆ, ಯೋಗ, ಧ್ಯಾನ ಮತ್ತು ನಡಿಗೆ. ಯೋಗವನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ವನ್ನು ಕಂಡುಕೊಳ್ಳಬಹುದು. ಆರೋಗ್ಯಕ್ಕಾಗಿ ಯೋಗ, ಆರೋಗ್ಯಕ್ಕಾಗಿ ಧ್ಯಾನ ಎಂದು ಹೇಳಿದರು.

    ಹಳ್ಳಿಹಳ್ಳಿಗೂ ಯೋಗವನ್ನು ಪ್ರಚಾರಮಾಡುವ ಸಲುವಾಗಿ ಮೊಬೈಲ್ ವ್ಯಾನ್ಗೆ ಚಾಲನೆ ನೀಡಲಾಗಿದೆ. ಧ್ಯಾನದಿಂದ ಆರೋಗ್ಯ, ಧ್ಯಾನದಿಂದ ನೆಮ್ಮದಿ, ಧ್ಯಾನದಿಂದಲೇ ಮಾನಸಿಕ, ದೈಹಿಕ, ಆಧ್ಯಾತ್ಮ ಬಾಧೆಗಳು ಕಾಲಕ್ರಮೇಣ ನಿವಾರಣೆಯಾಗುವುದರ ಜೊತೆಗೆ ಪ್ರೀತಿಯನ್ನು ಹಂಚುವ ಕೆಲಸವನ್ನು ಮಾಡುತ್ತದೆ. ಅದನ್ನು ಕಲಿಸಿಕೊಟ್ಟವರು ಹಾಗೂ ತಿಳಿಸಿಕೊಟ್ಟವರು ಶ್ರೀ ಮಾತಾಜಿ ನಿರ್ಮಲಾದೇವಿಯವರು,

    ಅವರ ಸಂದೇಶವನ್ನು ಪ್ರಪಂಚಕ್ಕೆ ಸಾರುವ ನಿಟ್ಟಿನಲ್ಲಿ ಮೊಬೈಲ್ ವ್ಯಾನ್ಗೆ ಚಾಲನೆ ನೀಡಿದ್ದೇವೆ. ಯೋಗ ಮತ್ತು ಧ್ಯಾನದ ಕಲಿಕೆ ಸಂಪೂರ್ಣವಾಗಿ ಉಚಿತವಾಗಿದ್ದು, ಎಲ್ಲರೂ ಸದ್ಭಳಕೆಯನ್ನು ಮಾಡಿಕೊಳ್ಳಬಹುದು. ಯೋಗದಿಂದ ನನಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿಲ್ಲ, ಅದರ ಕೃಪೆ ಸಹಜ ಯೋಗಕ್ಕೆ ಸಲ್ಲುತ್ತದೆ ಎಂದು ಸಹಜ ಯೋಗ ಸಂಸ್ಥೆಯ ಸದಸ್ಯರಾದ ಗುರುಮೂರ್ತಿ ಅವರು ತಿಳಿಸಿದರು.ಲೈಫ್ ಎಟರ್ನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಮನೋಜ್ ಕುಮಾರ್, ಸಹಜ ಯೋಗ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

    Post Views: 9

    Demo
    Share. Facebook Twitter LinkedIn Email WhatsApp

    Related Posts

    ಆಪರೇಷನ್ ಸಿಂಧೂರ್ ಬಗ್ಗೆ ಹೇಳಿಕೆ: ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದೂರು ದಾಖಲು

    May 20, 2025

    ಈ ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಯಾವುದೂ ಇಲ್ಲ: ಬಿ.ವೈ. ವಿಜಯೇಂದ್ರ ಕಿಡಿ

    May 20, 2025

    Breaking: RCB V/s SRH ಪಂದ್ಯ ಬೆಂಗಳೂರಿನಲ್ಲಿ ರದ್ದು..ಹಾಗಿದ್ರೆ ಎಲ್ಲಿ ನಡೆಯಲಿದೆ ಮ್ಯಾಚ್!‌

    May 20, 2025

    ಜನರ ಋಣ ತೀರಿಸಲು 6ನೇ ಭೂಗ್ಯಾರಂಟಿ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್

    May 20, 2025

    ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಮಾವೇಶವನ್ನು ರದ್ದು ಮಾಡಬೇಕಿತ್ತು: ಆರ್. ಅಶೋಕ್ ಕಿಡಿ

    May 20, 2025

    ಕುಡಿಯೋದು ಕಾವೇರಿ ನೀರು..ಉಸಿರಾಡೋ ಕನ್ನಡ ನೆಲದಲ್ಲಿ..ಆದ್ರೆ ಕನ್ನಡ ಮಾತಾಡಲ್ಲ ಎಂದ SBI ಬ್ಯಾಂಕ್‌ ಮ್ಯಾನೇಜರ್‌ ದರ್ಪ.. video ವೈರಲ್!

    May 20, 2025

    ಜನರ ಮುಂದೆ ಇಟ್ಟಿದ್ದ 145 ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಟಕ್ಕರ್

    May 20, 2025

    ರೀಲ್ಸ್‌ಗಾಗಿ ವಂದೇ ಭಾರತ್ ರೈಲಿನಲ್ಲೇ ಕುಣಿದು ಕುಪ್ಪಳಿಸಿದ ರೇಲ್ವೆ ಇಲಾಖೆ ಅಧಿಕಾರಿಗಳು: video viral

    May 20, 2025

    ಗೋಲ್ಡ್‌ ಕೇಸ್‌ನಲ್ಲಿ ನಟಿ ರನ್ಯಾ ರಾವ್‌ಗೆ ಷರತ್ತು ಬದ್ದ ಜಾಮೀನು ಮಂಜೂರು.. ಜಾಮೀನು ಸಿಕ್ಕಿದ್ರೂ ಬಿಡುಗಡೆ ಭಾಗ್ಯವಿಲ್ಲ!

    May 20, 2025

    ಮಲೆಮಹದೇಶ್ವರಬೆಟ್ಟ ತಪ್ದಲಿನ ಸಾಲೂರು ಮಠದ ಹಿರಿಯಶ್ರೀ ಲಿಂಗೈಕ್ಯ

    May 20, 2025

    “ಕೆಡಿ” ಹೀರೋಯಿನ್‌ ರೀಷ್ಮಾ ನಾಣಯ್ಯ ಸಹೋದರಿ ಈಗ ಭಾಸ್ಕರ್‌ ರಾವ್ ಸೊಸೆ!

    May 20, 2025

    ಸುಬ್ಬ-ಸುಬ್ಬಿ ಫೋನ್‌ ನಂಬರ್‌ ಕಹಾನಿ…ದರ್ಶನ್‌ ಕೈ ಹಿಡಿದು ಫೋನ್‌ ನಂಬರ್‌ಗೆ ಒತ್ತಾಯಿಸಿದ ಗೌಡ್ತಿ..!

    May 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.