ಆನೇಕಲ್: ಕನ್ನಡಿಗರು ವಿಶಾಲ ಹೃದಯದವರು..ಆದ್ರೆ ಕನ್ನಡತನ ತೋರಿಸದ, ನಮ್ಮ ಮಾತೃ ಭಾಷೆ ಬಗ್ಗೆ ದರ್ಪ ಮೆರೆದರೆ ಕೆಚ್ಚೆದೆಯ ಕನ್ನಡಿಗರು ಸಿಡಿದೇಳುತ್ತಾರೆ ಅನ್ನೋದಕ್ಕೆ ಸದ್ಯ ಆನೇಕಲ್ ತಾಲೂಕಿನ ಸೂರ್ಯ ನಗರದಲ್ಲಿ ನಡೆದಿರುವ ಘಟನೆಯೇ ಉದಾಹರಣೆ.
ಸೂರ್ಯ ನಗರ SBI ಬ್ಯಾಂಕ್ ಮ್ಯಾನೇಜರ್ ಆಗಿರುವ ಪ್ರಿಯಾಂಕಾ ಸಿಂಗ್ ಕನ್ನಡಿಗರ ಜೊತೆ ಅನುಚಿತ ವರ್ತನೆ ತೋರಿದ್ದಾರೆ. ಕನ್ನಡ ಮಾತಾಡಿ ಅಂದಿದ್ದಕ್ಕೆ ಬ್ಯಾಂಕ್ ಮ್ಯಾನೇಜರ್ ದರ್ಪ ತೋರಿದ್ದಾರೆ. ಬ್ಯಾಂಕ್‌ನಲ್ಲಿ ಕನ್ನಡದಲ್ಲಿ ಮಾತಾಡಬೇಕು ಎಂಬರೂಲ್ಸ್ ಇದೆಯಾ ಎಂದು ದಬ್ಬಾಳಿಕೆ ಹಾಕಿದ್ದಾರೆ. ಕನ್ನಡ ಮಾತಾಡಿ ಎಂದು ಹೇಳಿದ್ದಕ್ಕೆ ಮಾತಾಡೋದಿಲ್ಲ ಏನೀಗ ಯಾರೇ ಬಂದರೂ ಕನ್ನಡ ಮಾತಾಡೋದಿಲ್ಲ ಎಂದು ಮ್ಯಾನೇಜರ್ ದಬ್ಬಾಳಿಕೆ ತೋರಿಸಿದ್ದಾರೆ.