ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದೇ 23ರಂದು ನಡೆಯಬೇಕಿದ್ದ ರಾಯಲ್ ಚಾಲೆಂಜೆರ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಹೈವೋಲ್ಟೇಜ್ ಪಂದ್ಯ ರದ್ದಾಗಿದೆ. ಅಂದ್ರೆ ಬೆಂಗಳೂರಿನ ಬದಲು ಪಂದ್ಯ ಲಕ್ನೋಗೆ ಸ್ಥಳಾಂತರ ಮಾಡಲಾಗಿದೆ. ಬೆಂಗಳೂರಿನಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
Due to adverse weather conditions, the IPL has moved the RCB-SRH match on May 23 from Bengaluru to Lucknow pic.twitter.com/AGS6ZzCXvP
— ESPNcricinfo (@ESPNcricinfo) May 20, 2025
ರಾಜ್ಯಾದ್ಯಂತ ಮಳೆ ಅಬ್ಬರ ಜೋರಾಗಿದ್ದು, ಅದರಲ್ಲಿಯೂ ರಾಜಧಾನಿಯಲ್ಲಿ ವರುಣದೇವ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಇನ್ನೂ ಎರಡು ಮೂರು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಲಕ್ನೋಗೆ ಸ್ಥಳಾಂತರ ಮಾಡಲಾಗಿದೆ. ಮೊನ್ನೆ ಕೋಲ್ಕತ್ತಾ ವರ್ಸಸ್ ಆರ್ ಸಿಬಿ ಪಂದ್ಯ ಮಳೆಯಿಂದ ನಿಂತಿತ್ತು. ಹೀಗಾಗಿ ಈ ರೀತಿ ಆಗದಂತೆ ಪಂದ್ಯವನ್ನು ಏಕಾನಾ ಕ್ರೀಡಾಂಣಕ್ಕೆ ಶಿಫ್ಟ್ ಮಾಡಲಾಗಿದೆ.
🚨 News 🚨
Schedule for TATA IPL 2025 Playoffs announced.
Additionally, Match no. 65 between #RCB and #SRH shifted to Lucknow from Bengaluru.
🔽 Details | #TATAIPL
— IndianPremierLeague (@IPL) May 20, 2025